ಹೊಸಪೇಟೆ (ವಿಜಯನಗರ) :ಕಾರು ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾರುವನಹಳ್ಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ.
ಶಿವಕುಮಾರ್ (20) ಮೃತ ದುರ್ದೈವಿ. ಈತ ಚಿಲಕನಹಟ್ಟಿಗೆ ಹೋಗಿ ಔಷಧಿ ತೆಗೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಸ್ಥಳೀಯರು ಕಾರನ್ನು ಬೆನ್ನಟ್ಟಿ ಡಾಣಾಪುರ ಬಳಿ ಹಿಡಿದಿದ್ದಾರೆ. ಫ್ಲೈಓವರ್ಗಳು, ಸರ್ವೀಸ್ ರಸ್ತೆಗಳು ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದಾರೆ.