ಹೊಸಪೇಟೆ: ಪ್ರಬಲವಾದ ಕಾನೂನು ರೂಪಿಸಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದವರನ್ನು ಮಟ್ಟಹಾಕಿ ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಹೊಸಪೇಟೆ: ಡ್ರಗ್ಸ್ ತಡೆಗಟ್ಟಲು ಪ್ರಬಲ ಕಾನೂನು ರೂಪಿಸಲು ಆಗ್ರಹಿಸಿ ಪ್ರತಿಭಟನೆ - karnataka drug case
ಹೊಸಪೇಟೆಯಲ್ಲಿ ಪ್ರಬಲವಾದ ಕಾನೂನು ರೂಪಿಸಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದವರನ್ನು ಮಟ್ಟಹಾಕಿ ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
![ಹೊಸಪೇಟೆ: ಡ್ರಗ್ಸ್ ತಡೆಗಟ್ಟಲು ಪ್ರಬಲ ಕಾನೂನು ರೂಪಿಸಲು ಆಗ್ರಹಿಸಿ ಪ್ರತಿಭಟನೆ All-India Student Council](https://etvbharatimages.akamaized.net/etvbharat/prod-images/768-512-8884373-29-8884373-1600692821197.jpg)
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ
ಮಾದಕ ವಸ್ತುಗಳ ಪಿಡುಗು ರಾಜ್ಯವನ್ನು ವ್ಯಾಪಿಸಿರುವುದು ದುಃಖಕರ ಸಂಗತಿ. ಇದರಿಂದಾಗಿ ದೇಶಕ್ಕೆ ಆದರ್ಶ ಆಗಬೇಕಾದವರೆ ಡ್ರಗ್ಸ್ ಲೋಕದಲ್ಲಿ ಮುಳುಗಿ ವ್ಯಸನಿಗಳಾಗುತ್ತಿದ್ದಾರೆ. ಸಿನಿಮಾ ಲೋಕದ ನಟ-ನಟಿಯರನ್ನು ತಮ್ಮ ಆದರ್ಶವೆಂದು ಅನುಸರಿಸುವ ಜನರು ಇದ್ದಾರೆ. ಇದು ಸಮಾಜ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಹಾಗಾಗಿ ಡ್ರಗ್ಸ್ ತಡೆಗಟ್ಟಲು ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಅಮರನಾಥ ಅವರಿಗೆ ಮನವಿ ಸಲ್ಲಿಸಲಾಯಿತು. ಪರಿಷತ್ತಿನ್ ರಾಜ್ಯ ಕಾರ್ಯದರ್ಶಿ ಪ್ರತೀಕ ಮಾಳಿ ಇನ್ನಿತರರಿದ್ದರು.