ಹೊಸಪೇಟೆ: ತಾಲೂಕಿನ ಬೈಪಾಸ್ ರಸ್ತೆಯ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅರಣ್ಯ ಸಚಿವ ಆನಂದ ಸಿಂಗ್ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.
ಅರಣ್ಯ ಸಚಿವರಿಂದಲೇ ರಸ್ತೆ ತಡೆದು ಪ್ರತಿಭಟನೆ... ಯಾಕಾಗಿ? - ತಾಲೂಕಿನ ಬೈಪಾಸ್ ರಸ್ತೆಯ ಕಾಮಗಾರಿ ವಿಳಂಬ
ಇಂದು ಲಾರಿ ಮಾಲೀಕರ ಸಂಘದಿಂದ ನಡೆದ ಈ ಪ್ರತಿಭಟನೆಗೆ ಸಚಿವ ಆನಂದ್ ಸಿಂಗ್ ಬೆಂಬಲ ನೀಡಿದರು. ಬೈಪಾಸ್ ಮತ್ತು ಸಂಡೂರು ರಸ್ತೆಯ ಕಾಮಗಾರಿ ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ವಾಹನ ಸವಾರ ಇಂದಿಗೂ ಪರದಾಡುತ್ತಿದ್ದಾನೆ. ಈ ಹಿನ್ನೆಲೆ ಬೇಗ ಕಾಮಗಾರಿ ಪೂರ್ಣ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ.
ಇಂದು ಲಾರಿ ಮಾಲೀಕರ ಸಂಘದ ವತಿಯಿಂದ ನಡೆದ ಈ ಪ್ರತಿಭಟನೆಗೆ ಸಚಿವ ಆನಂದ್ ಸಿಂಗ್ ಬೆಂಬಲ ನೀಡಿದರು. ಬೈಪಾಸ್ ಮತ್ತು ಸಂಡೂರು ರಸ್ತೆಯ ಕಾಮಗಾರಿ ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ವಾಹನ ಸವಾರ ಇಂದಿಗೂ ಪರದಾಡುತ್ತಿದ್ದಾನೆ. ಈ ಹಿನ್ನೆಲೆ ಬೇಗ ಕಾಮಗಾರಿ ಪೂರ್ಣ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ.
ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರಸ್ತೆ ಕಾಮಗಾರಿ ಬೇಗ ಮುಗಿಸ್ತೀವಿ ಎಂದಿದ್ದ ಅಧಿಕಾಕಾರಿಗಳು ಈಗ ಉಲ್ಟಾ ಹೊಡೆದಿದ್ದಾರೆ. ಗ್ಯಾಮನ್ ಇಂಡಿಯಾ ಕಾಂಟ್ರ್ಯಾಕ್ಟ್ ರದ್ದಾಗಿದೆ ಅಂತಾ ಅಧಿಕಾರಿಗಳು ಹೇಳ್ತಿದ್ದಾರೆ. ಈ ಎಲ್ಲಾ ತೊಂದರೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಜನರಿಗೆ ಮುಕ್ತವಾಗಬೇಕು ಎಂದು ಸಚಿವರು ಹೇಳಿದರು.