ಕರ್ನಾಟಕ

karnataka

ETV Bharat / state

ವೃದ್ಧಾಪ್ಯ ವೇತನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ - ಬಳ್ಳಾರಿಯಲ್ಲಿ ಪ್ರತಿಭಟನೆ

ಬಳ್ಳಾರಿ ಸುತ್ತಮುತ್ತಲಿನ ಗ್ರಾಮದ ಜನರ ವೃದ್ಧಾಪ್ಯ ವೇತನ, ವಿಕಲಚೇತನರಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ, ಎಸ್.ಯು.ಸಿ.ಐ ನೇತೃತ್ವದಲ್ಲಿ ವೃದ್ಧರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Protest in Bellary
ವೃದ್ಧಾಪ್ಯ ವೇತನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ

By

Published : Dec 23, 2019, 3:09 PM IST

ಬಳ್ಳಾರಿ: ನಗರದ ಸುತ್ತಮುತ್ತಲಿನ ಗ್ರಾಮದ ಜನರ ವೃದ್ಧಾಪ್ಯ ವೇತನ, ವಿಕಲಚೇತರಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ, ಎಸ್.ಯು.ಸಿ.ಐ ಪಕ್ಷದ ನೇತೃತ್ವದಲ್ಲಿ ವೃದ್ಧರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ವೃದ್ಧಾಪ್ಯ ವೇತನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ

ತಾಲೂಕಿನ ಶ್ರೀಧರಗಡ್ಡೆ, ಕೋಳೂರು, ಮದಿರೆ, ಬಸರಕೋಡು, ಕುಡಿತಿನಿ, ಸೇರಿ ಮುಂತಾದ ಗ್ರಾಮಗಳಲ್ಲಿ ನೂರಾರು ಫಲಾನುಭವಿಗಳಿದ್ದು, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಮಾಸಿಕ ಪಿಂಚಣಿ ನೀಡಬೇಕು. ಹಲವಾರು ತಿಂಗಳ ಪಿಂಚಣಿ ಬಾಕಿಯಿದ್ದು, ಕೆಲವರಿಗೆ ಮಾತ್ರ ನೀಡಲಾಗುತ್ತಿದೆ‌. ಜೀವನ ವೆಚ್ಚ ದುಬಾರಿಯಾಗಿದ್ದು, ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಹಾಗಾಗಿ ವಿಳಂಬ ಮಾಡದೇ ಪಿಂಚಣಿ ನೀಡಬೇಕೆಂದು ಜಿಲ್ಲಾ ಕಾರ್ಮಿಕ ಸಮಿತಿ ಕಾರ್ಯದರ್ಶಿಎ.ದೇವದಾಸ್ ಆಗ್ರಹಿಸಿದ್ರು.

ಮಾಸಿಕ ₹10 ಸಾವಿರ ಪಿಂಚಣಿ ನೀಡಬೇಕು. ಸಂಕಷ್ಟದಲ್ಲಿರುವ ಜನರಿಗೆ ಪಿಂಚಣಿ ನೀಡಿ ಬದುಕುವ ಭರವಸೆ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.

ABOUT THE AUTHOR

...view details