ಕೆಲ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದು ಬಿಟ್ಟರೆ ಹೆಚ್ಚಿನವರು ಭಾಗಿಯಾಗಿಲ್ಲ. ಸಂಜೆ 6 ಗಂಟೆಯವರೆಗೆ ಬಳ್ಳಾರಿ ಬಂದ್ ಇದ್ದು, ಸದ್ಯ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬಳ್ಳಾರಿ ನಗರ ಕೇಂದ್ರಕ್ಕೆ ಮಾತ್ರ ಈ ಬಂದ್ನ ಎಫೆಕ್ಟ್ ಸೀಮಿತವಾಗಿದೆ. ಉಳಿದ ತಾಲೂಕಿನಲ್ಲಿ ಎಂದಿನಂತೆ ವಾಹನ ಸಂಚಾರ ನಡೆಯುತ್ತಿದೆ.
ಕುದುರೆ ಹಾಗೂ ಕತ್ತೆಗಳ ಮೆರವಣಿಗೆ ಈ ಹೋರಾಟದಲ್ಲಿ ಎಲ್ಲರ ಗಮನ ಸೆಳೆಯಿತು. ಪ್ರತಿಭಟನೆಯ ಭಾಗವಾಗಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಬೈಕ್ ಮೆರವಣಿಗೆ ಕೈಗೊಂಡರು.
ಅಹಿತಕರ ಘಟನೆಗಳಿಗೆ ಆಸ್ಪದ ನೀಡಿಲ್ಲ. ಪೊಲೀಸರ ಸರ್ಪಗಾವಲಿನಲ್ಲೇ ಈ ಬಳ್ಳಾರಿ ಬಂದ್ ನಡೆಯುತ್ತಿದೆ.