ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರುಗಡೆ ಡಾ. ಬಾಬು ಜಗಜೀವನ್ ರಾಮ್ ಜನಜೀವನ ವೇದಿಕೆಯ ಬಳ್ಳಾರಿ ಜಿಲ್ಲಾ ಘಟನೆ ನೇತೃತ್ವದಲ್ಲಿ ಇಂದು ಎ.ಜೆ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ಜಾರಿಗೆ ತರುಬೇಕೆಂದು ಪ್ರತಿಭಟನೆ ನಡೆಸಲಾಗಿದೆ.
ಬಳ್ಳಾರಿ: ಸದಾಶಿವ ಆಯೋಗ ಜಾರಿಗಾಗಿ ಪ್ರತಿಭಟನೆ - ಡಾ. ಬಾಬು ಜಗಜೀವನ್ ರಾಮ್ ಜನಜೀವನ ವೇದಿಕೆ
ಸದಾಶಿವ ಆಯೋಗವನ್ನು ಜಾರಿಗೆ ತರಬೇಕೆಂದು ಬಳ್ಳಾರಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಜನಜೀವನ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ
ಎ.ಜೆ ಸದಾಶಿವ ಆಯೋಗದ ವರದಿಯನ್ನು ಸುಪ್ರೀಂ ಕೋರ್ಟ್ ನ್ಯಾಯಾಲಯದ ತೀರ್ಪಿನಂತೆ ಜಾರಿಗೆ ತರಬೇಕು. ಬಳ್ಳಾರಿ ಜಿಲ್ಲೆಯ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠ ಸಂಶೋಧನಗೆ 10 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಹಾಗೂ ನಗರದಲ್ಲಿ ಇರುವ ಡಾ. ಬಾಬು ಜಗಜೀವನ್ ರಾಮ್ ಭವನ ಪೂರ್ಣಗೊಳಿಸಬೇಕು ಎಂದು ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಭೀಮಲಿಂಗಪ್ಪ, ಜೆ.ಸುಂಕಣ್ಣ, ಹೆಚ್.ಕೆಂಚಪ್ಪ ಮತ್ತು ಇನ್ನಿತರು ಭಾಗವಹಿಸಿದ್ದರು.
Last Updated : Sep 21, 2020, 4:50 PM IST