ಕರ್ನಾಟಕ

karnataka

ETV Bharat / state

ಬಿಎಸ್‌ವೈ ಸ್ವಜನ ಪಕ್ಷಪಾತದಿಂದ ಬಲಿಜ ಸಮುದಾಯಕ್ಕೆ 2ಎ ಮೀಸಲು ಸಿಗಲಿಲ್ಲ - ಬೃಹತ್ ಪ್ರತಿಭಟನೆ ವೇಳೆ ಆರೋಪ - 2A reservation for Balija community

ಬಲಿಜ ಸಮುದಾಯಕ್ಕೆ ಮೀಸಲಿರಿಸಿದ 2ಎ ಮೀಸಲಾತಿಯನ್ನ ವೀರಶೈವ ಲಿಂಗಾಯತ ಸಮುದಾಯದ ಬಣಜಿಗ ಸಮುದಾಯ ಕಿತ್ತುಕೊಂಡಿದ್ದು, ಅದಕ್ಕೆ ಮುಖ್ಯಮಂತ್ರಿ ಬಿ ಎಸ್​ಯಡಿಯೂರಪ್ಪನವರು ಕೂಡ ಸಾಥ್ ನೀಡಿದ್ದಾರೆ..

protest-demanding-2a-reservation-for-balija-community
ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

By

Published : Jan 6, 2021, 4:18 PM IST

ಬಳ್ಳಾರಿ :ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಬಲಿಜ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಜಮಾಯಿಸಿದ ಬಲಿಜ ಸಮುದಾಯದ ನೂರಾರು ಜನರು, ಕೆಲಕಾಲ ರಸ್ತೆತಡೆ ನಡೆಸಿದರು. ಬಳಿಕ ಗಡಿಗಿ ಚನ್ನಪ್ಪ ವೃತ್ತದಿಂದ ಬೆಂಗಳೂರು ರಸ್ತೆಯ ಮಾರ್ಗವಾಗಿ, ಮೀನಾಕ್ಷಿ ವೃತ್ತದ ರಸ್ತೆಯಿಂದ ಡಿಸಿ ಕಚೇರಿಯವರೆಗೆ ಪಾದಯಾತ್ರೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಲಿಜ ಸಮುದಾಯಕ್ಕೆ ಮೀಸಲಿರಿಸಿದ 2ಎ ಮೀಸಲಾತಿಯನ್ನ ವೀರಶೈವ ಲಿಂಗಾಯತ ಸಮುದಾಯದ ಬಣಜಿಗ ಸಮುದಾಯ ಕಿತ್ತುಕೊಂಡಿದ್ದು, ಅದಕ್ಕೆ ಮುಖ್ಯಮಂತ್ರಿ ಬಿ ಎಸ್​ಯಡಿಯೂರಪ್ಪನವರು ಕೂಡ ಸಾಥ್ ನೀಡಿದ್ದಾರೆ. ಬಣಜಿಗ ಸಮುದಾಯದ ಬಗ್ಗೆ ವಿಶೇಷ ಕಾಳಜಿವಹಿಸಿರುವ ಯಡಿಯೂರಪ್ಪನವರು, ಸ್ವಜಾತಿ ವ್ಯಾಮೋಹ, ಸ್ವಜನ ಪಕ್ಷಪಾತ ನಡೆಸುತ್ತಿದ್ದಾರೆ.

ಬಲಿಜ ಸಮುದಾಯಕ್ಕೆ ಮೀಸಲಿರಿಸಿದ್ದ 2ಎ ಮೀಸಲಾತಿಯನ್ನ ಬಣಜಿಗ ಸಮುದಾಯಕ್ಕೆ ನೀಡುವ ಮುಖೇನ ಬಲಿಜ ಸಮುದಾಯಕ್ಕೆ ದೊಡ್ಡ ಅವಮಾನ ‌ಮಾಡಿದ್ದಾರೆಂದು ಆರೋಪಿಸಿದರು.

ABOUT THE AUTHOR

...view details