ಬಳ್ಳಾರಿ: ಬಳ್ಳಾರಿ ಜಿಲ್ಲೆಯ ವಿಭಜನೆ ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿಯು 25 ದಿನಕ್ಕೆ ಕಾಲಿರಿಸಿದೆ.
ಅನಿರ್ದಿಷ್ಟಾವಧಿ ಧರಣಿಗೆ ಅಖಿಲ ಕರ್ನಾಟಕ ಕಮ್ಮ ಯುವಶಕ್ತಿ ಸಂಘ ಸಾಥ್ ಈ ಅನಿರ್ದಿಷ್ಟಾವಧಿ ಧರಣಿಗೆ ಅಖಿಲ ಕರ್ನಾಟಕ ಕಮ್ಮ ಯುವಶಕ್ತಿ ಸಂಘದ ಪದಾಧಿಕಾರಿಗಳು ಬೃಹತ್ ಪಾದಯಾತ್ರೆ ಮೆರವಣಿಗೆ ಹಮ್ಮಿಕೊಳ್ಳುವ ಮೂಲಕ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಕಮ್ಮ ಕಲ್ಯಾಣ ಮಂಟಪದ ಎದುರು ಕಮ್ಮ ಯುವಶಕ್ತಿ ಸಂಘದ ಪದಾಧಿಕಾರಿಗಳು ಜಮಾಯಿಸಿ ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಬಳಿಕ, ಕಮ್ಮ ಕಲ್ಯಾಣ ಮಂಟಪದಿಂದ ಕೋರ್ಟ್ ರಸ್ತೆಯ ಮಾರ್ಗವಾಗಿ ಡಬಲ್ ರಸ್ತೆ, ಗಡಿಗಿ ಚನ್ನಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪಾದಯಾತ್ರೆ ಮೆರವಣಿಗೆ ನಡೆಸಿದರು. ಪಾದಯಾತ್ರೆಯುದ್ಧಕ್ಕೂ ರಾಜ್ಯ ಸರ್ಕಾರದ ವಿರುದ್ಧದ ಘೋಷಣೆಗಳುಳ್ಳ ನಾಮಫಲಕಗಳನ್ನು ಪ್ರದರ್ಶನ ಮಾಡಿದ್ರು.
ಈ ಸುದ್ದಿಯನ್ನೂ ಓದಿ:ಶಾಮನೂರು ಶಿವಶಂಕರಪ್ಪ ಒಡೆತನದ ಡಿಸ್ಟಿಲರಿಯಲ್ಲಿ ಬೆಂಕಿ ಅವಘಡ: ಮೂವರಿಗೆ ಗಾಯ
ಕೇವಲ ಒಬ್ಬ ಸಚಿವನಿಗೋಸ್ಕರ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡೋದು ತರವಲ್ಲ. ಭಾಷಾವಾರು ವಿಂಗಡಣೆ ವೇಳೆ ಬಳ್ಳಾರಿ ಜಿಲ್ಲೆಯನ್ನು ಅಖಂಡವಾಗಿಯೇ ಉಳಿಸಲಾಗಿತ್ತು. ಹೀಗಾಗಿ, ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿಸೋದು ತರವಲ್ಲ. ಸದ್ಯ ಜಿಲ್ಲೆಯನ್ನು ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಸಬೇಕೆಂದು ಅಖಿಲ ಕರ್ನಾಟಕ ಕಮ್ಮ ಯುವಶಕ್ತಿ ಸಂಘದ ಯುವ ಮುಖಂಡ ಮುಂಡ್ಲೂರು ಪ್ರಭಂಜನ ಕುಮಾರ ಆಗ್ರಹಿಸಿದ್ದಾರೆ.