ಹೊಸಪೇಟೆ(ವಿಜಯನಗರ): ಕೇಂದ್ರ ಸರಕಾರ ಗ್ಯಾಸ್ ಬೆಲೆ ಏರಿಸಿರುವುದನ್ನು ಖಂಡಿಸಿ DYFI ಸಂಘಟನೆಯ ನೇತೃತ್ವದಲ್ಲಿ ಮುಖಂಡರು ನಗರದ ತಹಶೀಲ್ದಾರ್ ಕಚೇರಿ ಮುಂಭಾಗ ಕಟ್ಟಿಗೆ ಒಲೆಯಲ್ಲಿ ಟೀ ಮಾಡುವ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್ ಮಾತನಾಡಿ, ಕೊರೊನಾ ಸೋಂಕು ಸಾಮಾನ್ಯ ಜನತೆಯ ಬದುಕನ್ನು ಕಸಿದುಕೊಂಡಿರುವ ಈ ಕರಾಳ ಸಂದರ್ಭದಲ್ಲೇ, ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪೆಟ್ರೋಲ್-ಡೀಸೆಲ್ ಬೆಲೆ, ಧಾನ್ಯಗಳ ಬೆಲೆ, ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ಅಡುಗೆ ಎಣ್ಣೆಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದ್ದು, ಬದುಕು ನಡೆಸುವುದೇ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.