ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇಂದು ಬೆಳಿಗ್ಗೆಯಿಂದಲೇ ಎಸ್ಟಿ ಮತ್ತು ಎಸ್ಸಿ ವಿದ್ಯಾರ್ಥಿಗಳು ಫೆಲೋಶಿಪ್ ನೀಡುವವರೆಗೂ ಧರಣಿಯನ್ನು ಮಾಡುತ್ತೇವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಫೆಲೋಶಿಪ್ ನೀಡಿಲ್ಲ ಎಂದು ಹಂಪಿ ವಿವಿ ಸಂಶೋಧನಾರ್ಥಿಗಳಿಂದ ಪ್ರತಿಭಟನೆ - Protest by Hampi university researchers , fellowship
ಹಂಪಿ ಕನ್ನಡ ವಿಶ್ವವಿದ್ಯಾಲಯದ ಎಸ್ಸಿ ಮತ್ತು ಎಸ್ಟಿ ಪಿಹೆಚ್ಡಿ ವಿದ್ಯಾರ್ಥಿಗಳಿಗೆ ಕಳೆದ 22 ತಿಂಗಳಿಂದ ( ಎರಡು ವರ್ಷ ) ಫೆಲೋಶಿಪ್ ನೀಡಿಲ್ಲ ಎಂದು ಕುಲಪತಿ ಕಚೇರಿಯ ಮುಂದೆ ನೂರಾರು ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡಲಾಯಿತು.
ಫೆಲೋಶಿಪ್ ನೀಡಿಲ್ಲ ಎಂದು ಹಂಪಿ ವಿವಿ ಸಂಶೋಧನಾರ್ಥಿಗಳಿಂದ ಪ್ರತಿಭಟನೆ
ಈ ಹಿಂದೆ ಅನೇಕ ಬಾರಿ ಪತ್ರದ ಮೂಲಕ ಸಂಶೋಧನಾ ವಿದ್ಯಾರ್ಥಿಗಳು ಕುಲಪತಿಗೆ ಮನವಿ ಸಲ್ಲಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಆದ್ದರಿಂದ ಈ ಪ್ರತಿಭಟನೆಗೆ ನಿರ್ಧಾರ ಮಾಡಿ ಮೌಖಿಕವಾಗಿ ಮಾತನಾಡಲು ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಈಟಿವಿ ಭಾರತದ ಜೊತೆ ಫೋನ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕುಲಪತಿ ಸ.ಚಿ.ರಮೇಶ ಕುಮಾರ್ ಮತ್ತು ಕುಲಸಚಿವ ಪ್ರೊ. ಸುಬ್ಬರಾವ್ ಬೆಂಗಳೂರಿಗೆ ಮೀಟಿಂಗ್ಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.