ಬಳ್ಳಾರಿ: ನಿವೇಶನ, ವಿಮೆ, ನಿರ್ದಿಷ್ಟ ಕೂಲಿ ನೀಡುವುದೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ನಗರದ ಎಪಿಎಂಸಿಯ ಮಹಿಳಾ ಹಮಾಲರು ಪ್ರತಿಭಟನೆ ನಡೆಸಿ ಎಪಿಎಂಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಹಮಾಲರ ಸಂಘದ ಅಧ್ಯಕ್ಷ ಅಂಪೇರು ಹಾಲೇಶ್ವರಗೌಡ ನೇತೃತ್ವದಲ್ಲಿ ನೂರಾರು ಮಹಿಳಾ ಹಮಾಲರು ತಮ್ಮ ಹಮಾಲರ ಕಚೇರಿಯಿಂದ ಎಪಿಎಂಸಿ ಆಡಳಿತ ಕಚೇರಿಯವರೆಗೆ ಮೆರವಣಿಗೆ ಮೂಲಕ ತೆರಳಿ ಸರ್ಕಾರ ಮಹಿಳಾ ಹಮಾಲರ ಬಗ್ಗೆ ಹೊಂದಿರುವ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪತ್ರ ಇದನ್ನೂ ಓದಿ:ನಾಲ್ವರು ಸರಗಳ್ಳರ ಬಂಧನ: 134 ಗ್ರಾಂ ಚಿನ್ನಾಭರಣ ವಶ
2016ರಕ್ಕೂ ಮುನ್ನ ವಿಮೆ ದೊರೆಯುತ್ತಿತ್ತು. ಮರಣ ಹೊಂದಿದರೆ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತಿತ್ತು. ಆದರೆ ಅವ್ಯಾವ ಯೋಜನೆಗಳೂ ಈಗ ಇಲ್ಲದಂತಾಗಿದೆ. ಹೊಸಬರಿಗೆ ಲೈಸನ್ಸ್ ನೀಡುತ್ತಿಲ್ಲ, ನಿವೇಶನಗಳನ್ನೂ ಸಹ ನೀಡುತ್ತಿಲ್ಲ. ಹಾಗಾಗಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಮಂಡಳಿ ಸ್ಪಂದಿಸದಿದ್ದರೆ ತೀವ್ರ ಹೋರಾಟ ನಡೆಸಲಿದೆಂದು ಎಚ್ಚರಿಕೆ ನೀಡಿದರು.