ಬಳ್ಳಾರಿ: ನರೇಂದ್ರ ಮೋದಿ ಅವರ ಅಪ್ಪ ಬಂದರೂ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ಕಿಡಿಕಾರಿದ್ದಾರೆ.
ಮೋದಿ ಅಲ್ಲ ಅವರಪ್ಪ ಬಂದ್ರೂ ಕಾಂಗ್ರೆಸ್ ಪಕ್ಷ ಸರ್ವನಾಶ ಸಾಧ್ಯವಿಲ್ಲ: ಜೆ.ಎಸ್.ಆಂಜನೇಯಲು - Protest in Bellary'
ಬಳ್ಳಾರಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ, ನರೇಂದ್ರ ಮೋದಿ ಅವರ ಅಪ್ಪ ಬಂದರೂ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ಕಿಡಿಕಾರಿದ್ದಾರೆ.
ನಗರದ ರಾಯಲ್ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕೇಂದ್ರ ಬಿಜೆಪಿ ಸರ್ಕಾರ ಇಡಿಯನ್ನು ದುರುಪಯೋಗ ಪಡಿಸಿಕೊಂಡು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಕೈ ನಾಯಕರನ್ನು ತುಳಿಯಲು ಯತ್ನಿಸುತ್ತಿದೆ. ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಲು ಹೊಂಚುಹಾಕಿದೆ. ಆದರೆ ಬಿಜೆಪಿಯಿಂದ ಕಾಂಗ್ರೆಸ್ ನಾಯಕರು ಮತ್ತು ಮುಖಂಡರನ್ನು ಸರ್ವನಾಶ ಮಾಡಲು ಸಾದ್ಯವಿಲ್ಲ. ಮೋದಿ ಅವರೇ ನೀವಲ್ಲ ನಿಮ್ಮಪ್ಪ ಬಂದರೂ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂದು ಜೆ.ಎಸ್.ಆಂಜನೇಯಲು ಆರೋಪಿಸಿದರು.
ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸುಂಡಿ ನಾಗರಾಜು, ಬಳ್ಳಾರಿ ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ, ವಿಕ್ಕಿ , ವೆಂಕಟೇಶ್ ಹೆಗ್ಗಡೆ, ಶ್ರೀರಾಂಪುರ ನಾಗರಾಜು, ಶೀನ, ಕಾರ್ಪೊರೇಟರ್ಗಳಾದ ಕೆರೆಕೋಡಪ್ಪ, ಕಮೇಲ ಸೂರಿ, ಪರ್ವಿನ್ ಬಾನು, ಜಯಕುಮಾರ್ ನಾಯ್ಡು , ಅಲ್ಲಾಬಕಾಶ್, ಬಿ.ಕುಮಾರಸ್ವಾಮಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಜಂ, ನಿರಂಜನ್ ನಾಯ್ಡು, ಜೆ ಯರಿಸ್ವಾಮಿ, ಸಂತೋಷ ಸ್ವಾಮಿ, ನಾಗರಾಜ , ಶರ್ಮಾಸ ಸಾಬು, ಪ್ರೀತಿ, ಪ್ರವಲ್ಲಿಕಾ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.