ಹೊಸಪೇಟೆ/ಹುಬ್ಬಳ್ಳಿ:ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದ ವೇಳೆ ಹಿಮಪಾತವಾದ ಕಾರಣ ಖಾಸಗಿ ಹೊಟೇಲ್ನಲ್ಲಿ ಸಿಲುಕಿದ್ದ ಹುಬ್ಬಳ್ಳಿಯ ಎಂಟು ಜನ ಹಾಗೂ ಹೊಸಪೇಟೆಯ ಇಬ್ಬರು ಪ್ರವಾಸಿಗರನ್ನು ರಕ್ಷಿಸಲಾಗಿದೆ. ಒಟ್ಟು 10 ಜನ ಪ್ರವಾಸಿಗರು ಈಗ ಶ್ರೀನಗರದ ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗದ ಖಾಸಗಿ ಹೋಟೆಲ್ನಲ್ಲಿ 10 ಜನ ಉಳಿದುಕೊಂಡಿದ್ದರು. ಹುಬ್ಬಳ್ಳಿಯ ಕೇಶ್ವಾಪುರದ ಅಂಬಿಕಾ ನಗರದ ವೆಂಕಟೇಶ ಜಲಭಂಜನ್ ಕುಟುಂಬದ 8 ಜನ ಮತ್ತು ಹೊಸಪೇಟೆಯ ಪ್ರಕಾಶ್ ಹಾಗೂ ಸುಧಾ ಮೆಹರವಾಡೆ ದಂಪತಿ 9 ದಿನಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದರು.