ಕರ್ನಾಟಕ

karnataka

By

Published : Dec 6, 2020, 7:52 PM IST

ETV Bharat / state

ಹಂಪಿಯ ಐತಿಹಾಸಿಕ ಕಲ್ಲಿನ ರಥದ ಸಂರಕ್ಷಣೆಗೆ ಸರಪಳಿ ಅಳವಡಿಕೆ

ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಮುಂಭಾಗದಲ್ಲಿರುವ ಐತಿಹಾಸಿಕ ಕಲ್ಲಿನ ರಥವನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಇಲಾಖೆ ರಥದ ಸುತ್ತಲೂ ಸರಪಳಿ ಅಳವಡಿಸಿದೆ.

hampi stone chariot
ಹಂಪಿಯ ಕಲ್ಲಿನ ರಥ

ಹೊಸಪೇಟೆ: ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಮುಂಭಾಗದ ವಿಶ್ವ ಪ್ರಸಿದ್ಧ ಕಲ್ಲಿನ ರಥದ ಸುತ್ತಲೂ ಸಂರಕ್ಷಣಾ ಸರಪಳಿಯನ್ನು ಅಳವಡಿಸಲಾಗಿದೆ.

ಇದಕ್ಕೂ ಮುನ್ನ ರಥವನ್ನು ಮುಟ್ಟದಂತೆ ಸುತ್ತಲೂ ಗೆರೆಗಳನ್ನು ಎಳೆಯಲಾಗಿತ್ತು. ಆದರೆ ಪ್ರವಾಸಿಗರು ಗೆರೆ ದಾಟಿ ಸ್ಮಾರಕವನ್ನು ಮುಟ್ಟುತ್ತಿದ್ದರು. ಹೀಗಾಗಿ ಇಲಾಖೆ ಈ ವ್ಯವಸ್ಥೆ ಮಾಡಿದೆ.

ಓದಿ: ಗತಕಾಲದ ಸಂಬಂಧ ಕಳೆದುಕೊಳ್ಳಲಿದೆ 'ಕಂಪ್ಲಿ': ಬಳ್ಳಾರಿ ಜಿಲ್ಲೆ ವಿಭಜನೆಯಿಂದ ದೂರವಾಯ್ತು 'ವಿಜಯನಗರ'ದ ನಂಟು

ಈ ಬಗ್ಗೆ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಅಧೀಕ್ಷಕ ಕಾಳಿಮುತ್ತು ಪ್ರತಿಕ್ರಿಯಿಸಿ, 'ಇಲ್ಲಿನ ಕಲ್ಲಿನ ಸ್ಮಾರಕವನ್ನು ಪ್ರವಾಸಿಗರು ಮುಟ್ಟುತ್ತಿದ್ದರು. ಅಲ್ಲದೇ, ಸ್ಮಾರಕದ ಮೇಲೆ ಕುಳಿತುಕೊಂಡು‌ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದು, ಇದರಿಂದ ಸ್ಮಾರಕಕ್ಕೆ ಹಾನಿಯಾಗುವ ಸಂಭವವಿತ್ತು.‌ ಈ ಚಟುವಟಿಕೆಗಳನ್ನು ಈಗ ತಪ್ಪಿಸಲಾಗಿದೆ. ಮುಂದೆಯೂ ಸ್ಮಾರಕಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ABOUT THE AUTHOR

...view details