ಬಳ್ಳಾರಿ:2012-2020ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಬರೋಬ್ಬರಿ 120 ನವಜಾತ ಹೆಣ್ಣುಮಕ್ಕಳ ರಕ್ಷಣೆ ಮಾಡಲಾಗಿದೆ. ವಿಪರ್ಯಾಸ ಎಂದರೆ ಒಂದು ಪ್ರಕರಣ ಕೂಡ ದಾಖಲಾಗಿಲ್ಲ. ಅವುಗಳ ಕೊಲೆ ಅಥವಾ ಸಾವು ಕೂಡ ಸಂಭವಿಸಿಲ್ಲ. ಆದರೆ, ಸುಮೊಟೋ ಕೇಸ್ ದಾಖಲಿಸಬೇಕಿದ್ದ ಪೊಲೀಸ್ ಇಲಾಖೆ ಮಾತ್ರ ಮೌನವಹಿಸಿದೆ.
ಆಗತಾನೇ ಜನಿಸಿದ ಶಿಶುವನ್ನು ತ್ಯಜಿಸಿರುವ ಪೋಷಕರಿಗೆ ಕನಿಷ್ಠ ಶಿಕ್ಷೆಯನ್ನೂ ನೀಡದೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬುದು ಈ ಮೂಲಕ ಗೊತ್ತಾಗುತ್ತಿದೆ. ಎಂಟು ವರ್ಷಗಳಿಂದ ಜಿಲ್ಲೆಯಲ್ಲಿ ರಕ್ಷಿಸಲಾದ 185 ನವಜಾತ ಶಿಶುಗಳ ಪೈಕಿ 120 ನವಜಾತ ಹೆಣ್ಣು ಶಿಶುಗಳಿವೆ. ಒಟ್ಟು 140 ಶಿಶುಗಳನ್ನು ಅವಲಂಬಿತರಿಗೆ ನೀಡಲಾಗಿದೆ.