ಹೊಸಪೇಟೆ: ಸರಕಾರ ಕೃಷಿ ಇಲಾಖೆ ಅಭಿವೃದ್ಧಿಗೆ ಶ್ರಮಿಸುತ್ತಿದೆ. ರೈತರು ದೇಶದ ಬೆನ್ನೆಲಬು ಎಂದು ಕರೆಯಲಾಗುತ್ತದೆ. ಅನ್ನದಾತರು ಉಳಿಯಬೇಕು ಎಂದರೆ ಲಾಭದಾಯಕವಾಗಿರುವ ಕೃಷಿಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಹೊಸ ಹೊಸ ಕೃಷಿಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ನೀಲಮ್ಮ ಪಂಚಪ್ಪ ಕರೆ ನೀಡಿದರು.
ಅನ್ನದಾತರ ಉಳಿವಿಗೆ ಲಾಭದಾಯಕ ಕೃಷಿ ಅಗತ್ಯ: ತಾ.ಪಂ. ಅಧ್ಯಕ್ಷೆ ಪ್ರತಿಪಾದನೆ - Ilakheya nade Raitara manebagilige agriculture program in hospet
ರೈತ ಅಭಿವೃದ್ಧಿ ಹೊಂದಿದರೆ ದೇಶವೇ ಅಭಿವೃದ್ಧಿ ಹೊಂದಿದಂತೆ. ಅನ್ನದಾತ ರೈತ ಉಳಿಯಬೇಕಾದರೆ ಲಾಭದಾಯಕ ಕೃಷಿಯಲ್ಲಿ ತೊಡಗಿಕೊಳ್ಳಿ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಪಂಚಪ್ಪ ಕರೆ ನೀಡಿದರು.
ನಗರದ ಚಿತ್ತವಾಡಿಯ ರೈತ ಸಂಘದ ಭವನದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಇಲಾಖೆಯ ನಡಿಗೆ ರೈತರ ಮನೆಬಾಗಿಲಿಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಪಂಚಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರೈತರಿಗಾಗಿ ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲಾ ರೈತರು ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಜಮೀನಿನಲ್ಲಿ ಒಂದೇ ಬೆಳೆಯನ್ನು ಬೆಳೆದು ಆತಂಕಕ್ಕೆ ಒಳಗಾಗುವುದಕ್ಕಿಂತ ಮಿಶ್ರ ಬೆಳೆಗಳ ಕಡೆಗೆ ಗಮನ ಹರಿಸುವುದು ಉತ್ತಮ ಎಂದು ರೈತರಿಗೆ ಸಲಹೆ ನೀಡಿದರು.
ಬ್ಯಾಂಕುಗಳು ರೈತರಿಗೆ ಬೆಳೆ ಸಾಲವನ್ನು ನೀಡುತ್ತವೆ. ಕೃಷಿಗೆ ಬೇಕಾಗಿರುವ ವಸ್ತಗಳು ಸಬ್ಸಿಡಿ ಹಾಗೂ ರಿಯಾಯಿತಿ ದರದಲ್ಲಿ ರೈತಾಪಿ ಕುಟುಂಬಕ್ಕೆ ಕೈಗೆಟುಕುವ ದರದಲ್ಲಿ ಸಿಗುತ್ತಿದೆ. ಇವೆಲ್ಲ ಸವಲತ್ತುಗಳನ್ನ ಬಳಸಿಕೊಂಡು ರೈತರು ಅಭಿವೃದ್ಧಿಯಾಗಬೇಕಿದೆ ಎಂದರು.