ಕರ್ನಾಟಕ

karnataka

ETV Bharat / state

ಚುನಾವಣಾ ಕರ್ತವ್ಯ ಮಾಡಲು ತೊಂದರೆ: ಮಹಿಳಾ ನೌಕರರಿಗೆ ಡಿಸಿ ಕ್ಲಾಸ್​​​​ - etv bharath

ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಮಹಿಳಾ ನೌಕರರ ನಿರಾಸಕ್ತಿಗೆ ಬಳ್ಳಾರಿಯ ಜಿಲ್ಲಾಧಿಕಾರಿ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ

By

Published : Apr 9, 2019, 8:54 PM IST

ಬಳ್ಳಾರಿ: ಚಿಕ್ಕ ಮಕ್ಕಳು ಇರುವ ಕಾರಣ ಆರೋಗ್ಯ ಸರಿಯಿಲ್ಲ, ಕೈ ಮುರಿದಿದೆ, ತಮ್ಮನ ಮದುವೆ ಇದೆ ಎನ್ನುವ ಹತ್ತಾರು ಕಾರಣಗಳನ್ನು ಹೊತ್ತು ಜಿಲ್ಲಾಧಿಕಾರಿಗಳನ್ನು ಕಾಣಲು ಬಂದ ಸರ್ಕಾರಿ ಮಹಿಳಾ ನೌಕರರಿಗೆ ಚುನಾವಣೆ ದಿನ ಕರ್ತವ್ಯ ಮಾಡಲೇಬೇಕು ಎಂದು ಡಿಸಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿ ಮೊರೆ ಹೋದ ಮಹಿಳೆಯರು
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿಯರು, ಉಪನ್ಯಾಸಕಿಯರು ಮತ್ತು ಇನ್ನಿತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು 2019ನೇ ಸಾಲಿನ ಲೋಕಸಭಾ ಚುನಾವಣಾ ಕರ್ತವ್ಯ ಮಾಡಲು ಚಿಕ್ಕ ಮಕ್ಕಳು ಇದ್ದಾರೆ, ಆರೋಗ್ಯ ಸರಿಯಿಲ್ಲ, ಕೈ ಮುರಿದಿದೆ, ವಯಸ್ಸಾಗಿದೆ ಎನ್ನುವ ಹತ್ತಾರು ಕಾರಣಗಳನ್ನು ಹೊತ್ತು ಬಂದಿದ್ದರು. ಬಂದ ಮಹಿಳೆಯರ ಅರ್ಜಿ ಪಡೆದ ಜಿಲ್ಲಾಧಿಕಾರಿ ಡಾ. ರಾಮ ಪ್ರಸಾದ್ ಮನೋಹರ್ ಅವರು ಚುನಾವಣಾ ದಿನದಂದು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇಬೇಕು. ಬೇರೆ ದಿನ ಬೇಕಾದರೇ ರಜೆ ಪಡೆದುಕೊಳ್ಳಿ ಎಂದು ಹೇಳಿದ್ದಾರೆ. ಆದರೆ ನಿಂತಲ್ಲೇ ಜಿಲ್ಲಾಧಿಕಾರಿಯವರ ಆಜ್ಞೆ ಪರಿಹಾರ ಕೇಳಲು ಬಂದ ಮಹಿಳೆಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಈ ಕುರಿತು ಬೇಸರ ವ್ಯಕ್ತಪಡಿಸಿ ಮನೆಗಳಿಗೆ ತೆರಳಿದ್ದಾರೆ.

ABOUT THE AUTHOR

...view details