ಕರ್ನಾಟಕ

karnataka

ETV Bharat / state

ಕುರುಗೋಡು ಬಳಿ ಖಾಸಗಿ ಬಸ್ ಪಲ್ಟಿ: ತಪ್ಪಿತು ಭಾರಿ ಅನಾಹುತ - latest bellary news

ಕುರುಗೋಡು ತಾಲೂಕಿನ ಕಂಪ್ಲಿ-ಕೊಟ್ಟಾಲ್ ಮಾರ್ಗದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಸಿದ್ಧಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಪಲ್ಟಿಯಾಗಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಬಸ್​ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಖಾಸಗಿ ಬಸ್ ಪಲ್ಟಿ: ಪ್ರಾಣಾಪಾಯದಿಂದ ಪಾರಾದ ಹತ್ತಾರು ಪ್ರಯಾಣಿಕರು..!

By

Published : Oct 10, 2019, 10:41 AM IST

ಬಳ್ಳಾರಿ:ಜಿಲ್ಲೆಯ ಕುರುಗೋಡು ತಾಲೂಕಿನ ಕಂಪ್ಲಿ-ಕೊಟ್ಟಾಲ್ ಮಾರ್ಗದಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಸಿದ್ಧಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್​ ಹತ್ತಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯ ಕುರುಗೋಡು, ಬಾದನಹಟ್ಟಿ, ಎರಂಗಳಿಗಿ ಗ್ರಾಮಗಳ ಮಾರ್ಗವಾಗಿ ಬಳ್ಳಾರಿಯತ್ತ ಚಲಿಸುತ್ತಿದ್ದ ಖಾಸಗಿ ಬಸ್ ದಿಢೀರ್​​ ಪಲ್ಟಿಯಾಗಿದೆ. ಬಸ್ಸಿನೊಳಗಿದ್ದ ಸುಮಾರು 40ಕ್ಕೂ ಅಧಿಕ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲವೆಂದು ಖಾಸಗಿ ಬಸ್ಸಿನ ಮಾಲೀಕ ನಾಗಿರೆಡ್ಡಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸಿದ್ಧಮ್ಮನಹಳ್ಳಿ ಗ್ರಾಮ ಹೊರವಲಯದ ಇಳಿಜಾರು ಪ್ರದೇಶದಲ್ಲಿ ಬಸ್ ಜಾರಿಕೊಂಡಿದ್ದು, ಮೇಲ್ಭಾಗದಲ್ಲಿದ್ದ ಪ್ರವೇಶ ದ್ವಾರದ ಬಳಿ ಪ್ರಯಾಣಿಕರು ಮೆಲ್ಲನೆ ರಸ್ತೆಗೆ ಇಳಿದುಕೊಂಡಿದ್ದಾರೆಂದು ಬಸ್​ ಮಾಲೀಕ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details