ಕರ್ನಾಟಕ

karnataka

ETV Bharat / state

ಸಾಲ ಮಾಡಿ ಸಂಬಳ ನೀಡುತ್ತಿದ್ದೇವೆ ; ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಕಿಡಿ - ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಪ್ರತಿಭಟನೆ

ಕೆಲ ಸರ್ಕಾರಿ ಶಾಲೆಯ ಶಿಕ್ಷಕರು ಈ ವರ್ಷ ಖಾಸಗಿ ಶಾಲೆಗಳು ಆರಂಭವಾಗಲ್ಲ ಎಂದು ಹೇಳಿ, ಸರ್ಕಾರಿ ಶಾಲೆಯಲ್ಲಿ ಪುಸ್ತಕ, ಬಟ್ಟೆ ಉಚಿತವಾಗಿ ನೀಡುತ್ತಾರೆ, ಪಾಠಗಳನ್ನು ಮಾಡಲಾಗುತ್ತದೆ. ವರ್ಗಾವಣೆ ಪತ್ರ ತೆಗೆದುಕೊಂಡು ಬನ್ನಿ ಎನ್ನುವ ಕೆಲಸ ಮಾಡುತ್ತಿದ್ದಾರೆ..

protest
ಬಳ್ಳಾರಿ

By

Published : Sep 5, 2020, 8:27 PM IST

ಬಳ್ಳಾರಿ :ಗಣಿನಾಡಿನಲ್ಲಿ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನಾಚರಣೆ ಮಾಡುವ ಬದಲು ಶಿಕ್ಷಕರ ಕರಾಳದಿನ ಎಂದು ಪ್ರತಿಭಟನೆ ಮಾಡಿ, ಖಾಸಗಿ ಶಾಲೆಗಳ ಸಮಸ್ಯೆಗಳಿಗೆ ಸ್ಪಂದನೆ ಮಾಡುವಂತೆ ಡಿಡಿಪಿಐಗೆ ಮನವಿ ಪತ್ರ ನೀಡಲಾಯ್ತು.

ಗಣಿನಾಡಿನಲ್ಲಿ ಶಾಲಾ ಆಡಳಿತ ಮಂಡಳಿಗಳ ಆಕ್ರೋಶ

ಬಳ್ಳಾರಿ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಇಂದು ಡಿಡಿಪಿಐ ಕಚೇರಿಯ ಮುಂದೆ ಶಿಕ್ಷಕರ ದಿನಾಚರಣೆ ಬದಲು ಶಿಕ್ಷಕರ ಕರಾಳ ದಿನವನ್ನಾಗಿ ಆಚರಣೆ ಮಾಡಿದರು. ಈ ಸಮಯದಲ್ಲಿ ಬಳ್ಳಾರಿ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ ಅವರು ಮಾತನಾಡಿ, ಇಂದು ಡಿಡಿಪಿಐ ಕಚೇರಿಯ ಮುಂದೆ ಶಿಕ್ಷಕರ ದಿನ ಆಚರಣೆ ಮಾಡುವ ಬದಲು ಶಿಕ್ಷಕರ ಕರಾಳದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ. ಹಾಗೇ ಸರ್ಕಾರಿ ಶಾಲೆಗಳಲ್ಲಿ ವಠಾರ ಪಾಠ ಮಾಡುತ್ತಿದ್ದಾರೆ. ಅದನ್ನು ಖಾಸಗಿ ಶಾಲೆಗಳಲ್ಲಿ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೇ ಮಕ್ಕಳ ಜೀವನ ಹಾಳಾಗುತ್ತದೆ ಎಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆ ಎಂದು ವರ್ಗ ಮಾಡದೆ ನಮ್ಮ ಖಾಸಗಿ ಶಾಲೆಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯ ಮಾಡಿದರು. ಆನ್​ಲೈನ್ ಪಾಠ ಮಾಡಿದ್ರೆ ಶುಲ್ಕ ಪಡೆಯಬೇಡಿ ಎಂದು ಒತ್ತಾಯ ಮಾಡುತ್ತಾರೆ. ಶಿಕ್ಷಕರಿಗೆ ಸಾಲ‌ಮಾಡಿ ಸಂಬಳ ನೀಡುತ್ತಿದ್ದೇವೆ ಎಂದರು.

ಬೇಡಿಕೆಗಳು :

1. ಶಿಕ್ಷಕರಿಗೆ ವೇತನ ನೀಡಬೇಕು.

2. ವಠಾರ ಶಾಲೆ ತರ ನಮಗೂ ಅವಕಾಶ ನೀಡಿ.

3. ಪೋಷಕರ ಒತ್ತಡ ಇದೆ. ಕೊರೊನಾ ಮುಂಜಾಗೃತೆಯಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅನುವು ನೀಡಿ ಎಂದು ಪ್ರತಿಭಟನೆ ವೇಳೆ ಬೇಡಿಕೆಯನ್ನಿಟ್ಟಿದ್ದಾರೆ.

ಬಳಿಕ ಮಾತನಾಡಿದ ಕಾರ್ಯದರ್ಶಿ ಬಿ.ಎನ್‌ ಬಸವರೆಡ್ಡಿ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಪಡೆಯುವ ಸೌಲಭ್ಯದಂತೆ, ಅನುದಾನ ರಹಿತ ಶಾಲೆಯ ಶಿಕ್ಷಕರಿಗೆ ಒಂದರಷ್ಟು ಸಹ ಏನೂ ದೊರೆತಿಲ್ಲ. ಮಾರ್ಚ್​ನಿಂದ ಶಾಲೆಗಳು ಬಂದ್ ಆಗಿವೆ‌. ಆಗಿನಿಂದ ಪೋಷಕರು ಯಾರೂ ಶಾಲೆಗೆ ಶುಲ್ಕ ಪಾವತಿ ಮಾಡಲು ಬರುತ್ತಿಲ್ಲ. ಹಾಗಾಗಿ ನಾಲ್ಕೈದು ತಿಂಗಳಿಂದ ಶಿಕ್ಷಕರಿಗೆ ಸಂಬಳವಿಲ್ಲದೆ ತೊಂದರೆಯಾಗಿದೆ ಎಂದರು‌.

ಕೆಲ ಸರ್ಕಾರಿ ಶಾಲೆಯ ಶಿಕ್ಷಕರು ಈ ವರ್ಷ ಖಾಸಗಿ ಶಾಲೆಗಳು ಆರಂಭವಾಗಲ್ಲ ಎಂದು ಹೇಳಿ, ಸರ್ಕಾರಿ ಶಾಲೆಯಲ್ಲಿ ಪುಸ್ತಕ, ಬಟ್ಟೆ ಉಚಿತವಾಗಿ ನೀಡುತ್ತಾರೆ, ಪಾಠಗಳನ್ನು ಮಾಡಲಾಗುತ್ತದೆ. ವರ್ಗಾವಣೆ ಪತ್ರ ತೆಗೆದುಕೊಂಡು ಬನ್ನಿ ಎನ್ನುವ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಆಯುಕ್ತರು, ಸಚಿವರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

ಈ ಸಮಯದಲ್ಲಿ ವಿವಿಧ ಖಾಸಗಿ ಶಾಲೆಯ ಶಿಕ್ಷಕರಾದ ಈಶ್ವರ, ಹನುಮಂತಪ್ಪ, ಚಂದ್ರಶೇಖರ್, ಶ್ರೀನಿವಾಸ್, ಪರಮೇಶ್ವರ್, ಗಂಗಣ್ಣ, ಮಲ್ಲಿಕಾರ್ಜುನ ಇನ್ನಿತರರು ಹಾಜರಿದ್ದರು.

ABOUT THE AUTHOR

...view details