ಬಳ್ಳಾರಿ: ಪೆರೋಲ್ ಮೇಲೆ ಹೊರ ಬಂದಿದ್ದ ನಗರದ ಕೇಂದ್ರ ಕಾರಾಗೃಹದ ಸಜಾಬಂದಿ ಪರಾರಿಯಾಗಿದ್ದಾನೆ.
ಪೆರೋಲ್ ಮೇಲೆ ಹೊರಬಂದು ಪರಾರಿಯಾದ ಕೈದಿ - ಬಳ್ಳಾರಿ ಜೈಲು
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿವಾಸಿಯಾದ ನಾಗೇಶ್ ಎಂಬುವವ ಪೆರೋಲ್ ಮೇಲೆ ಹೊರಬಂದು ಪರಾರಿಯಾಗಿದ್ದಾನೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
![ಪೆರೋಲ್ ಮೇಲೆ ಹೊರಬಂದು ಪರಾರಿಯಾದ ಕೈದಿ ಕೈದಿ ಪರಾರಿ, Prisoner escaped from Bellay Jail](https://etvbharatimages.akamaized.net/etvbharat/prod-images/768-512-6017847-thumbnail-3x2-nin.jpg)
ಕೈದಿ ಪರಾರಿ
ಕೊರಚರ ನಾಗೇಶ (46) ಕಾರಾಗೃಹಕ್ಕೆ ವಾಪಸ್ ತೆರಳದ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗೇಶ್ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿವಾಸಿಯಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕೈದಿ 6 ವರ್ಷಗಳಿಂದ ಕೇಂದ್ರ ಕಾರಾಗೃಹದಲ್ಲೇ ಸಜಾಬಂದಿಯಾಗಿದ್ದ ಈತನಿಗೆ 15 ದಿನಗಳ ಕಾಲ ಪೆರೋಲ್ ರಜೆ ನೀಡಲಾಗಿದ್ದು, ಫೆ.5 ರಂದು ಕಾರಾಗೃಹಕ್ಕೆ ವಾಪಸ್ ತೆರಳಬೇಕಿತ್ತು. ಆದರೆ, ಈತ ಮತ್ತೇ ವಾಪಸ್ ಹೋಗದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.