ಕರ್ನಾಟಕ

karnataka

ETV Bharat / state

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರುದ್ಧ ಹೋರಾಟ: ಪುರೋಹಿತರ ಸಂಘದ ಬೆಂಬಲ - latest protest in bellary

ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡೋದು ತರವಲ್ಲ ಎಂದು ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಇಂದೂ ಮುಂದುವರಿದಿದೆ. ಈ ಹೋರಾಟಕ್ಕೆ ಪುರೋಹಿತರ ಸಂಘ ಕೂಡ ಬೆಂಬಲ ಸೂಚಿಸಿದೆ.

priests union supports for protest against bellary divide
ಹೋರಾಟಕ್ಕೆ ಪುರೋಹಿತರ ಸಂಘ ಬೆಂಬಲ

By

Published : Jan 5, 2021, 12:56 PM IST

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯನ್ನ ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಈ ದಿನ 23 ದಿನಕ್ಕೆ ಕಾಲಿಟ್ಟಿದೆ.

ಹೋರಾಟಕ್ಕೆ ಪುರೋಹಿತರ ಸಂಘ ಬೆಂಬಲ

ಜಿಲ್ಲಾ ವೀರಶೈವ ಜಂಗಮ ಅರ್ಚಕ ಮತ್ತು ಪುರೋಹಿತರ ಸಂಘದ ಪದಾಧಿಕಾರಿಗಳು ಈ ದಿನದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇಲ್ಲಿನ ಡಿಸಿ ಕಚೇರಿಯ ಎದುರು ಸ್ಥಾಪಿಸಲಾದ ತಾತ್ಕಾಲಿಕ ಟೆಂಟ್​ನಲ್ಲಿ ನಾನಾ ಸಂಘಟನೆಗಳ ಮುಖಂಡರೊಂದಿಗೆ ಪುರೋಹಿತರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದ್ದಾರೆ.

ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡೋದು ತರವಲ್ಲ. ಭಾಷಾವಾರು ವಿಂಗಡಣೆ ವೇಳೆಯಲ್ಲಿ ಬಳ್ಳಾರಿ ಜಿಲ್ಲೆಯನ್ನ ಅಖಂಡವಾಗಿಯೇ ಉಳಿಸಲಾಗಿತ್ತು. ಹೀಗಾಗಿ, ರಾಜ್ಯ ಸರ್ಕಾರ ಈ ಜಿಲ್ಲೆಯ ವಿಭಜನೆ ಮಾಡೋದು ಸೂಕ್ತವಲ್ಲ. ಕೂಡಲೇ ನೂತನ ವಿಜಯನಗರ ಜಿಲ್ಲೆ ರಚನೆಯನ್ನ ಕೈಬಿಡಬೇಕೆಂದು ಹಿರಿಯ ಮುಖಂಡ ಟಿ.ಜಿ.ವಿಠ್ಠಲ ಆಗ್ರಹಿಸಿದ್ದಾರೆ.

ಕಾವಿ ಬಟ್ಟೆ ಪ್ರದರ್ಶನ:

ಜಿಲ್ಲಾ ವೀರಶೈವ ಅರ್ಚಕ ಮತ್ತು ಪುರೋಹಿತರ ಸಂಘದಿಂದ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿ ಹೋರಾಟದಲ್ಲಿ ಕಾವಿ ಬಟ್ಟೆಗಳನ್ನ ಧರಿಸಿಕೊಂಡೇ ಹೋರಾಟಕ್ಕಿಳಿದಿರೋದು ವಿಶೇಷವೆನಿಸಿದೆ‌.

ಇದನ್ನೂ ಓದಿ:ಅಂತಃಕರಣದ ಕುಬೇರ: ಅನಾರೋಗ್ಯ ಪೀಡಿತ ಮಾಜಿ ನೌಕರನ ಮನೆ ಬಾಗಿಲಿಗೆ ಬಂದ ರತನ್ ಟಾಟಾ!

For All Latest Updates

TAGGED:

ABOUT THE AUTHOR

...view details