ಕರ್ನಾಟಕ

karnataka

ETV Bharat / state

ಬಳ್ಳಾರಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಸಿದ್ಧಲಿಂಗಸ್ವಾಮಿ ಇನ್ನಿಲ್ಲ... - ಬಳ್ಳಾರಿ, ಪತ್ರಿಕಾ ಛಾಯಾಗ್ರಾಹಕ ನಿಧನ , ಗಣ್ಯರಿಂದ ಸಂತಾಪ, ಛಾಯಾಗ್ರಾಹಕ ಬಿ.ಎಂ ಸಿದ್ದಲಿಂಗ ಸ್ವಾಮಿ ನಿಧನ

ಬಳ್ಳಾರಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಬಿ.ಎಂ ಸಿದ್ದಲಿಂಗಸ್ವಾಮಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಪತ್ರಿಕಾ ಛಾಯಾಗ್ರಾಹಕನ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಛಾಯಾ ಗ್ರಾಹಕ ಬಿ.ಎಂ ಸಿದ್ಧಲಿಂಗ ಸ್ವಾಮಿ ನಿಧನ

By

Published : Jul 12, 2019, 9:47 AM IST

ಬಳ್ಳಾರಿ: ಹಿರಿಯ ಪತ್ರಿಕಾ ಛಾಯಾಗ್ರಾಹಕ ಬಿ.ಎಂ. ಸಿದ್ಧಲಿಂಗಸ್ವಾಮಿ (48) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಮುಖ ಕನ್ನಡ ಹಾಗೂ ತೆಲುಗು ದಿನಪತ್ರಿಕೆ ಮತ್ತು ಕರ್ನಾಟಕ ಫೋಟೋ ನ್ಯೂಸ್ (ಕೆಪಿಎನ್) ಎಜೆನ್ಸಿಯಲ್ಲಿ ಛಾಯಾಗ್ರಾಹಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಛಾಯಾಗ್ರಾಹಕ ವೃತ್ತಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸಿದ್ಧಲಿಂಗಸ್ವಾಮಿಯವರ ಅಗಲಿಕೆಯಿಂದ ಇಡೀ ಛಾಯಾಗ್ರಾಹಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಳ್ಳಾರಿ ಪತ್ರಕರ್ತರ ಬಳಗ ಜೊತೆಗೆ ಜಿಲ್ಲೆಯ ಗಣ್ಯರು ಕಂಬನಿ ಸಂತಾಪ ಸೂಚಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details