ಬಳ್ಳಾರಿ:ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಮೆಚ್ಚಿ ಬಳ್ಳಾರಿಯ ಎಸಿಬಿ ಇನ್ಸ್ಪೆಕ್ಟರ್ ಶ್ರೀಧರ್ ದೊಡ್ಡಿ ಅವರಿಗೆ ರಾಷ್ಟ್ರಪತಿ ಚಿನ್ನದ ಪದಕವನ್ನು ರಾಜ್ಯಪಾಲ ವಜುಭಾಯ್ ವಾಲಾ ಪ್ರದಾನ ಮಾಡಿದ್ದಾರೆ.
ಶ್ರೀಧರ್ ದೊಡ್ಡಿಗೆ ರಾಷ್ಟ್ರಪತಿ ಚಿನ್ನದ ಪದಕ... ಡಿವೈಎಸ್ಪಿಯಾಗಿ ಬಡ್ತಿ
ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಮೆಚ್ಚಿ ಬಳ್ಳಾರಿಯ ಎಸಿಬಿ ಇನ್ಸ್ಪೆಕ್ಟರ್ ಶ್ರೀಧರ್ ದೊಡ್ಡಿ ಅವರಿಗೆ ರಾಷ್ಟ್ರಪತಿ ಚಿನ್ನದ ಪದಕವನ್ನು ರಾಜ್ಯಪಾಲ ವಜುಭಾಯ್ ವಾಲಾ ಪ್ರದಾನ ಮಾಡಿದ್ದಾರೆ.
ಶ್ರೀಧರ್ ದೊಡ್ಡಿ ಮೂಲತಃ ಆಂಧ್ರಪ್ರದೇಶದ ಎಮ್ಮಿಗನೂರಿನ ಗ್ರಾಮದವರಾಗಿದ್ದು, ಬಳ್ಳಾರಿಯ ವೀರಶೈವ ಮಹಾವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದರು. ಇವರು 1982ರಲ್ಲಿ ಪೊಲೀಸ್ ಪೇದೆಯಾಗಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಠಾಣೆಯಲ್ಲಿ ಕೆಲಸ ಮಾಡಿದರು. ನಂತರ 2000ರಲ್ಲಿ ಪಿಎಸ್ಐ ಆಗಿ ಕಲಬುರಗಿಯ ನಿಂಬರಗಾ ಪೊಲೀಸ್ ಠಾಣೆಯಲ್ಲಿ ಕಾರ್ಯವಹಿಸಿದರು. 2018ರ ನವೆಂಬರ್ನಲ್ಲಿ ಎಸಿಬಿ ಇನ್ಸ್ಪೆಕ್ಟರ್ ಆಗಿ ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದರು. ಸದ್ಯ ರಾಯಚೂರಿನ ರಾಜ್ಯ ಗುಪ್ತಚರ ಇಲಾಖೆಯ ಡಿವೈಎಸ್ಪಿ ಆಗಿ ಆಗಸ್ಟ್ 2ರಂದು ಕೆಲಸಕ್ಕೆ ಹಾಜರಾಗುತ್ತಿರುವುದಾಗಿ ತಿಳಿಸಿದ್ದಾರೆ.
ಇವರು ಬಳ್ಳಾರಿ, ಕಲಬುರಗಿ, ಬೀದರ್, ವಿಜಯಪುರ, ಹೊಸಪೇಟೆ, ಬೆಂಗಳೂರು, ಶಿವಮೊಗ್ಗ, ರಾಯಚೂರಿನಲ್ಲಿ ಒಟ್ಟು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಮತ್ತು 2019 ಜುಲೈ 31ರಂದು ರಾಷ್ಟ್ರಪತಿಗಳ ಚಿನ್ನದ ಪದಕ ಪಡೆದುಕೊಂಡಿದ್ದಾರೆ.