ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಪರಿಶಿಷ್ಟ ಪಂಗಡದ ಮಹಿಳೆ ದೇವಿರಮ್ಮ ಅಧ್ಯಕ್ಷರಾಗಿ, ಸಾಮಾನ್ಯ ವರ್ಗದ ಚಿನ್ಮಯನಂದ ಸ್ವಾಮಿ ಉಪಾಧ್ಯಕ್ಷರಾಗಿ ಲಾಟರಿ ಮೂಲಕ ಆಯ್ಕೆಯಾಗಿದ್ದಾರೆ.
10 ಸದಸ್ಯ ಬಲವುಳ್ಳ ಗ್ರಾಮ ಪಂಚಾಯತ್ಗೆ ಒಬ್ಬ ಸದಸ್ಯ ಗೈರಾಗಿದ್ದರಿಂದ 9 ಜನರ ಸಂಖ್ಯಾ ಬಲದಲ್ಲಿ ರೇಖಾ ಹಾಗೂ ಗಂಗಾಧರಪ್ಪ ಬಣದ 5 ಮತಗಳ ಪೈಕಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರೇಖಾ ಅವರ ಮತ ಬ್ಯಾಲೆಟ್ ಪತ್ರದಲ್ಲಿ ಸಹಿ ಮಾಡಿ ಚಲಾಯಿಸಿದ್ದರಿಂದ ಹಾಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಚಲಾಯಿಸಿದ ಎರಡು ಮತಗಳು ತಿರಸ್ಕೃತಗೊಂಡು 4 ಮತಗಳು ಸಮಬಲವಾದ್ದರಿಂದ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಲಾಟರಿ ಮೂಲಕ ಅಧ್ಯಕ್ಷರಾಗಿ ದೇವಿರಮ್ಮ ಹಾಗೂ ಉಪಾಧ್ಯಕ್ಷರಾಗಿ ಚಿನ್ಮಯನಂದ ಸ್ವಾಮಿ ಆಯ್ಕೆಯಾದರು.