ಕರ್ನಾಟಕ

karnataka

ETV Bharat / state

ಮೀಸಲಾತಿ ನೀಡದಿದ್ದರೆ ಬಿಜೆಪಿ ಸರಕಾರಕ್ಕೆ ಬೇಡರ ಶಾಪ ತಟ್ಟಲಿದೆ: ಪ್ರಸಾನ್ನಾನಂದ ಸ್ವಾಮೀಜಿ - ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ

ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡದಿದ್ದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಕ್ಕೆ ಬೇಡರ ಶಾಪ ತಟ್ಟಿತ್ತು.‌ ಇದೀಗ ಬಿಜೆಪಿ ಸರಕಾರಕ್ಕೂ ಶಾಪ ತಟ್ಟಲಿದೆ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.

swameeji
swameeji

By

Published : Oct 17, 2020, 7:41 PM IST

ಹೊಸಪೇಟೆ (ಬಳ್ಳಾರಿ):ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5 ಮೀಸಲಾತಿ ನೀಡಲಿಲ್ಲ.‌ ಹಾಗಾಗಿ ಬೇಡರ ಶಾಪ ತಟ್ಟಿತ್ತು.‌ ಈಗ ಬಿಜೆಪಿ ಸರಕಾರಕ್ಕೆ ತಟ್ಟಲಿದೆ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.

ನಗರದ ಆಕಾಶವಾಣಿಯ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಹೆಚ್ಚಳ ಸಲುವಾಗಿ ಬಳ್ಳಾರಿ ಜಿಲ್ಲೆಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಪ್ರಸಾನ್ನಾನಂದ ಸ್ವಾಮೀಜಿ ಸಭೆ

ಅ.31ರ ಒಳಗಡೆ ಮುಖ್ಯಮಂತ್ರಿ ಯಡಿಯೂರಪ್ಪ ಮೀಸಲಾತಿ ನೀಡಬೇಕು. ಇಲ್ಲದಿದ್ದರೇ ಬೇಡರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.

ನಾಯಮೂರ್ತಿ ನಾಗಮೋಹನದಾಸ್ ಅವರ ವರದಿ ಬಂದು ಮೂರು ತಿಂಗಳು ಕಳೆದಿದೆ. ಆದರೆ, ಸರಕಾರ ಅನುಷ್ಠಾನ ಮಾಡುತ್ತಿಲ್ಲ.‌ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆಯನ್ನು ನೀಡಿದ್ದರು.‌ ಆದರೆ ಅವರು ಮಾತಿನಂತೆ ನಡೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸಾನ್ನಾನಂದ ಸ್ವಾಮೀಜಿ ಸಭೆ

ಕೊರೊನಾದ ಅಪ್ಪ, ಅಮ್ಮ, ಅಜ್ಜ ಯಾರೇ ಬಂದರೂ ಹೋರಾಟ ನಿಲ್ಲದು. ‌ನಿರಂತರ ಹೋರಾಟ ಮಾಡಲಾಗುವುದು. ಕೆಲವರು ಹೆಂಡ ಮತ್ತು ಖಂಡವನ್ನು ನೀಡಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಅದು ಮುಂದಿನ ದಿನಗಳಲ್ಲಿ ಸಾಧ್ಯವಿಲ್ಲ ಎಂದರು.

ಸಭೆಗೆ ಬಾರದ ವಾಲ್ಮೀಕಿ ಸಮುದಾಯದವ ಜಿಲ್ಲೆಯ ಶಾಸಕರು ಹಾಗೂ ಸಂಸದರಿಗೆ ವಿರೋಧ ವ್ಯಕ್ತಪಡಿಸಲಾಯಿತು.

For All Latest Updates

TAGGED:

ABOUT THE AUTHOR

...view details