ಕರ್ನಾಟಕ

karnataka

ETV Bharat / state

ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾ.. 16 ದಿನ ಬಳ್ಳಾರಿಯಲ್ಲಿ ಜನಜಾಗೃತಿ

ಮಕ್ಕಳ ಜನನದ ಮಧ್ಯೆ ಅಂತರವಿಡಲು ತಾತ್ಕಾಲಿಕ ವಿಧಾನಗಳು ಲಭ್ಯವಿದ್ದು, ಈವರೆಗೆ 7206 ಮಹಿಳೆಯರಿಗೆ ವಂಕಿ ಅಳವಡಿಸಲಾಗಿದೆ. 8142 ಮಾತ್ರೆಗಳನ್ನು ಮಹಿಳಾ ಫಲಾನುಭವಿಗಳಿಗೆ ವಿತರಿಸಲಾಗಿದೆ. ಇತ್ತೀಚೆಗೆ ಬಂದ ಗರ್ಭ ನಿರೋಧಕ ಚುಚ್ಚುಮದ್ದನ್ನು (ಎಮ್.ಪಿ.ಎ) 1846 ಫಲಾನುಭವಿಗಳು ಪಡೆಯುತ್ತಿದ್ದಾರೆ..

World population day
World population day

By

Published : Jul 11, 2020, 5:10 PM IST

ಬಳ್ಳಾರಿ :ಜನಸಂಖ್ಯಾ ನಿಯಂತ್ರಣದ ಜೊತೆಗೆ ಜನಸಂಖ್ಯಾ ಸ್ಥಿರತೆಯನ್ನು ಕಾಪಾಡುವುದು ಬಹುಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್ ಜನಾರ್ಧನ್ ಹೇಳಿದರು. ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಜಾಗೃತಿ ಜಾಥಾಗೆ ಡಾ. ಹೆಚ್ ಜನಾರ್ಧನ್ ಚಾಲನೆ ನೀಡಿ ಮಾತನಾಡಿದರು.

ಜನಸಂಖ್ಯಾ ನಿಯಂತ್ರಣ ಮತ್ತು ಜನಸಂಖ್ಯೆ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಬಾಲ್ಯ ವಿವಾಹ ತಡೆಗಟ್ಟುವುದು, ಹೆಣ್ಣಿಗೆ 18 ವರ್ಷ ಮೇಲ್ಪಟ್ಟ ನಂತರ ಮದುವೆ ಮಾಡಿಸುವುದು, ಗಂಡಿಗೆ 21 ವರ್ಷ ಮೇಲ್ಪಟ್ಟ ನಂತರ ಮದುವೆ ಮಾಡಿಸುವುದು, ಮದುವೆ ನಂತರ ಕನಿಷ್ಟ ಮೂರು ವರ್ಷಗಳವರೆಗೆ ಮಕ್ಕಳಾಗುವುದನ್ನು ತಡೆಗಟ್ಟುವುದು, ಎರಡು ಮಕ್ಕಳಿಗೆ ಸಂತಾನ ನಿಯಂತ್ರಿಸುವುದು, ಒಂದು ಮಗುವಿನ ನಂತರ ಕನಿಷ್ಟ ಮೂರು ವರ್ಷ ಅಂತರವಿಡುವುದು, ಕುಟುಂಬ ಕಲ್ಯಾಣ ಪದ್ಧತಿ ಅಳವಡಿಸುವಂತೆ ಹೆಚ್ಚಿನ ಗಮನ ಹರಿಸುವುದರ ಮೂಲಕ ದೇಶದ ಸಮಗ್ರ ಪಾಲುದಾರರಾಗೋಣ ಎಂದು ಹೇಳಿದರು. ವಿಪತ್ತಿನಲ್ಲಿಯೂ ಕುಟುಂಬ ಯೋಜನೆಯ ತಯಾರಿ–ಸದೃಢ ರಾಷ್ಟ್ರ ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ ಎಂಬುದು ಈ ವರ್ಷದ ಘೋಷಣೆಯಾಗಿದೆ ಎಂದರು.

*17960 ಮಹಿಳಾ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ :ಜನಸಂಖ್ಯೆ ನಿಯಂತ್ರಣಕ್ಕಾಗಿ ಪ್ರಸ್ತುತ ಆರೋಗ್ಯ ಇಲಾಖೆಯಡಿ ಪುರುಷ ಮತ್ತು ಮಹಿಳೆರಿಯಗೆ ಶಾಶ್ವತ ಶಸ್ತ್ರಚಿಕಿತ್ಸಾ ವಿಧಾನಗಳಿದ್ದು, ಮಹಿಳೆಯರಿಗೆ ಲ್ಯಾಪ್ರೊಸ್ಕೋಪಿಕ್ ಮತ್ತು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಇದೆ. ಇದರ ಅಡಿಯಲ್ಲಿ ಈವರೆಗೆ 17960 ಮಹಿಳಾ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪುರುಷರಿಗೆ ನೋ ಸ್ಕಾಲ್‍ಪೇಲ್ ವೆಸಾಕ್ಟಮಿ ಶಸ್ತ್ರಚಿಕಿತ್ಸೆ ಇದ್ದು, ಇದರ ಅಡಿಯಲ್ಲಿ 25 ಜನ ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವಿವರಿಸಿದರು.

ಮಕ್ಕಳ ಜನನದ ಮಧ್ಯೆ ಅಂತರವಿಡಲು ತಾತ್ಕಾಲಿಕ ವಿಧಾನಗಳು ಲಭ್ಯವಿದ್ದು, ಈವರೆಗೆ 7206 ಮಹಿಳೆಯರಿಗೆ ವಂಕಿ ಅಳವಡಿಸಲಾಗಿದೆ. 8142 ಮಾತ್ರೆಗಳನ್ನು ಮಹಿಳಾ ಫಲಾನುಭವಿಗಳಿಗೆ ವಿತರಿಸಲಾಗಿದೆ. ಇತ್ತೀಚೆಗೆ ಬಂದ ಗರ್ಭ ನಿರೋಧಕ ಚುಚ್ಚುಮದ್ದನ್ನು (ಎಮ್.ಪಿ.ಎ) 1846 ಫಲಾನುಭವಿಗಳು ಪಡೆಯುತ್ತಿದ್ದಾರೆ.

ವಿಶೇಷವಾಗಿ, ಹೆರಿಗೆಯಾದ ತಕ್ಷಣ 48 ಗಂಟೆ ಒಳಗಡೆ 4192 ಮಹಿಳೆಯರಿಗೆ ಪಿಪಿಐಯುಸಿಡಿ(ವಂಕಿ)ಅಳವಡಿಸುವುದರ ಮೂಲಕ ಜನಸಂಖ್ಯೆಯನ್ನು ಗಣನೀಯವಾಗಿ ನಿಯಂತ್ರಿಸಲಾಗಿದೆ. ಪುರುಷರಿಗೆ ನಿರೋಧ್ ಲಭ್ಯವಿದ್ದು, 12233 ಫಲಾನುಭವಿಗಳಿಗೆ ನಿರೋಧ್ ವಿತರಿಸಿ ಜಿಲ್ಲೆಯಲ್ಲಿ ಜನಸಂಖ್ಯೆ ನಿಯಂತ್ರಿಸಲು ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details