ಬಳ್ಳಾರಿ: ಇಡೀ ವಿಶ್ವವನ್ನು ಕಾಡುತ್ತಿರುವ ಈ ಕೊರೊನಾ ಮಹಾಮಾರಿಗೆ ಮನಕುಲ ನಲುಗಿ ಹೋಗಿದೆ. ಯಾವುದೇ ಕ್ಷೇತ್ರವನ್ನು ಬೆಂಬಿಡದೆ ಕಾಡುತ್ತಿರುವ ವೈರಸ್ ರೈತರ ಜೀವವನ್ನೂ ಕಿತ್ತು ತಿನ್ನುತ್ತಿದೆ.
ಕೊರೊನಾ ಎಫೆಕ್ಟ್: ದಾಳಿಂಬೆ ಹಣ್ಣು ಬೆಳೆದು ಜೆಸಿಬಿ ಬಾಯಿಗೆ ಕೊಟ್ಟ ರೈತರು! - pomegranate crop
ಉತ್ತಮ ಇಳುವರಿ ಬಂದರೂ ಸೂಕ್ತ ಮಾರುಕಟ್ಟೆ ಇಲ್ಲದೆ ಬಳ್ಳಾರಿ ಜಿಲ್ಲೆಯಾದ್ಯಂತ ದಾಳಿಂಬೆ ಬೆಳೆಯನ್ನು ರೈತರು ಸಂಪೂರ್ಣವಾಗಿ ಜೆಸಿಬಿಯಿಂದ ನಾಶ ಮಾಡುತ್ತಿದ್ದಾರೆ.
ಹೌದು, ಈ ದೇಶದ ಬೆನ್ನೆಲುಬಾದ ರೈತ ಬೆಳೆದ ಬೆಳೆಯನ್ನು ಮಾರಾಟ ಮಾಡಲು ದಾರಿ ಕಾಣದ ಸ್ಥಿತಿ ನಿರ್ಮಾಣವಾಗಿದೆ. ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ರೈತ ಮಹಿಳೆಯೋರ್ವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಬೆಳೆಯನ್ನು ಜೆಸಿಬಿ ಮೂಲಕ ನಾಶ ಮಾಡಿದ್ದಾರೆ.
ಸುಮಾರು ಆರು ಎಕರೆ ಜಮೀನಿನಲ್ಲಿ ಈ ದಾಳಿಂಬೆ ಬೆಳೆದಿದ್ದು, ಉತ್ತಮ ಇಳುವರಿ ಸಹ ಬಂದಿತ್ತು. ಆದರೆ, ಬೆಳೆದ ಬೆಳೆಯನ್ನು, ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗದ ಕಾರಣ ಬೆಳೆಯನ್ನು ಸಂಪೂರ್ಣವಾಗಿ ಜೆಸಿಬಿಯಿಂದ ನಾಶ ಮಾಡಿದ್ದಾರೆ. ಕೇವಲ ಇದು ಇವರ ಒಬ್ಬರ ಕಥೆ ಅಲ್ಲ, ಹೂವಿನ ಹಡಗಲಿ ತಾಲೂಕಿನ ಬಹುತೇಕ ರೈತರು ಕೃಷಿ ಇಲಾಖೆಯಿಂದ ಸೌಲಭ್ಯ ಸರಿಯಾಗಿ ಸಿಗದ ಕಾರಣ ತಮ್ಮ ತಮ್ಮ ತೋಟಗಳಲ್ಲಿ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.