ಕರ್ನಾಟಕ

karnataka

ETV Bharat / state

ಸ್ವಹಿತಾಸಕ್ತಿಗಾಗಿ ಕೆಲ ರಾಜಕಾರಣಿಗಳು ದೇಶ ಲೂಟಿ ಮಾಡ್ತಿದ್ದಾರೆ: ಸಂತೋಷ್​ ಹೆಗ್ಡೆ - ನಿವೃತ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ

ರಾಜಕಾರಣದಲ್ಲಿ ಸ್ವ ಅಭಿವೃದ್ಧಿಯ ಭೂತ ಸೇರಿಕೊಂಡು ಈ ದೇಶದ ಆರ್ಥಿಕ ಸಂಪನ್ಮೂಲವನ್ನು ಲೂಟಿ ಮಾಡುತ್ತಿದೆ ಎಂದು ಸಂತೋಷ್​​ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ರಾಜಕಾರಣಿಗಳು ದೇಶವನ್ನು ಲೂಟಿ ಮಾಡುತ್ತಿದ್ದಾರೆ: ಸಂತೋಷ್​ ಹೆಗ್ಡೆ

By

Published : Oct 26, 2019, 1:36 PM IST

Updated : Oct 26, 2019, 3:33 PM IST

ಬಳ್ಳಾರಿ:ಇಂದಿನ ರಾಜಕಾರಣಿಗಳಲ್ಲಿ ಸ್ವ ಅಭಿವೃದ್ಧಿಯ ದುರಾಸೆ ಹೆಚ್ಚಾಗಿದ್ದು, ಅದನ್ನು ಹೋಗಲಾಡಿಸುವ ಶಕ್ತಿ ಯುವ ಜನರಲ್ಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ಹೇಳಿದ್ದಾರೆ.

ಸ್ವಹಿತಾಸಕ್ತಿಗಾಗಿ ಕೆಲ ರಾಜಕಾರಣಿಗಳು ದೇಶ ಲೂಟಿ ಮಾಡ್ತಿದ್ದಾರೆ: ಸಂತೋಷ್​ ಹೆಗ್ಡೆ

ನಗರದಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಡಿ ಸಾವಿರಾರು ಕೋಟಿ ರೂ.ಗಳ ಹಗರಣ ನಡೆಯುತ್ತಿದೆ. ಕೇವಲ ಪೇಪರ್​ಗಳಲ್ಲೇ ಅಭಿವೃದ್ಧಿಯಾಗಿಬಿಟ್ಟಿದೆ. ಆದರೆ, ಮೀಸಲಿಟ್ಟ ಅನುದಾನವನ್ನ ಕೊಳ್ಳೆ ಹೊಡೆಯಲಾಗುತ್ತೆ. ಅಂತಹ ಜನಪ್ರತಿನಿಧಿಗಳನ್ನ ಸೋಲಿಸುವಂತಹ ಕೆಲಸ ಆಗಬೇಕಿದೆ. 2017ರ ರಾಜ್ಯ ಬಜೆಟ್​​ನಲ್ಲಿ ಅಭಿವೃದ್ಧಿಗೋಸ್ಕರ ಸಾವಿರಾರು ಕೋಟಿ ರೂ. ಮೀಸಲಿರಿಸಲಾಗಿದೆ. ಆದರೊಳಗೆ ಕೇವಲ 18ರಷ್ಟು ಸೋರಿಕೆಯಾದ್ರೆ ಎಷ್ಟೊಂದು ಕೋಟಿಗಳು ಸ್ವ ಅಭಿವೃದ್ಧಿಯ ರಾಜಕಾರಣಿಗಳ ಬೊಕ್ಕಸಕ್ಕೆ ಸೇರುತ್ತೆ ಎಂಬುದನ್ನು ಊಹೆ ಮಾಡಿಕೊಳ್ಳಿ ಎಂದರು.


ಚುನಾಯಿತ ಪ್ರತಿನಿಧಿಗಳಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಅರಿವಿದ್ದರೆ ಸಾಕೆಂಬ ನಿರ್ಧಾರ ಪ್ರಸ್ತಾಪವಾಗುತ್ತೆ. ಆದರೀಗ ಕನಿಷ್ಠ ವಿದ್ಯಾರ್ಹತೆ ಹೊಂದಿರುವ ವಿದ್ಯಾವಂತರಿಂದಲೇ ಈ ದೇಶ ಹಾಳಾಗುತ್ತಿದೆ ಎಂದು ಸಂತೋಷ್​ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Last Updated : Oct 26, 2019, 3:33 PM IST

ABOUT THE AUTHOR

...view details