ಬಳ್ಳಾರಿ: ರಾಜ್ಯ ಸರ್ಕಾರ ಘೋಷಿಸಿರುವ ಸಂಡೇ ಲಾಕ್‌ಡೌನ್ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಹೊರ ಬಂದವರಿಗೆ ಪೊಲೀಸರು ಲಾಠಿಯಿಂದ ಬಿಸಿ ಮುಟ್ಟಿಸಿದ್ದಾರೆ.
ಅನಗತ್ಯ ಹೊರಬಂದವರಿಗೆ ಲಾಠಿ ರುಚಿ ತೋರಿಸಿದ ಗಣಿನಾಡಿನ ಪೊಲೀಸರು - Police take action against people
ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರ್ಕಾರ ಸಂಡೇ ಲಾಕ್ ಡೌನ್ ಜಾರಿ ಮಾಡಿದೆ. ಆದರೆ ಇದನ್ನು ಉಲ್ಲಂಘಿಸಿ ನಗರದಲ್ಲಿ ಸಂಚರಿಸಿದ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಬಳ್ಳಾರಿ
ನಗರದ ಪ್ರಮುಖ ವೃತ್ತಗಳಾದ ರಾಯಲ್, ಮೋತಿ, ಎಸ್ಪಿ, ಸುಧಾ ಸರ್ಕಲ್‌ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಪೊಲೀಸರು ನಿಯೋಜನೆಗೊಂಡಿದ್ದು, ಹತ್ತಾರು ಆಟೋ, ಬೈಕ್, ಟ್ಯಾಕ್ಸಿ ಸೇರಿದಂತೆ ಇನ್ನಿತರೆ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸೋಮವಾರದಿಂದ ಶ್ರಾವಣ ಮಾಸವಿರುವುದರಿಂದ ಬೆಳ್ಳಂಬೆಳಗ್ಗೆ ಅನೇಕರು ಮಟನ್, ಚಿಕನ್ ಖರೀದಿಗೆ ಮುಗಿಬಿದ್ದರು. ಇವರೆಲ್ಲರಿಗೂ ಪೊಲೀಸರು ತಿಳಿಹೇಳಿ ಮನೆಗೆ ಕಳುಹಿಸಿದರು.