ಕರ್ನಾಟಕ

karnataka

ETV Bharat / state

7 ಲಕ್ಷ ಮೌಲ್ಯದ ಅಕ್ರಮ ಗಾಂಜಾ ಗಿಡ ಸೀಜ್ ; ಸಂಡೂರು ಅಬಕಾರಿ ನಿರೀಕ್ಷಕರಿಂದ ದಾಳಿ - ಬಳ್ಳಾರಿ ಗಾಂಜಾ ಗಿಡ ವಶ ಸುದ್ದಿ

ಅಕ್ರಮವಾಗಿ ಬೆಳೆದಿದ್ದ ಅಂದಾಜು 31 ಗಾಂಜಾ ಗಿಡಗಳನ್ನ ಬೆಳೆದಿದ್ದು, ಒಟ್ಟು 49 ಕೆಜಿ 240 ಗ್ರಾಂನಷ್ಟು ಬೆಳೆಯನ್ನ ಸೀಜ್ ಮಾಡಲಾಗಿದೆ. ಆ ಹೊಲಗಳ ಮೂಲ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ..

ಗಾಂಜಾ ಗಿಡ ಸೀಜ್
ಗಾಂಜಾ ಗಿಡ ಸೀಜ್

By

Published : Nov 15, 2020, 6:15 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಎಂ.ಗುಂಡ್ಲಹಳ್ಳಿ- ಬಸಾಪುರ ಗ್ರಾಮದ ಬಳಿ ಮೆಣಸಿನಕಾಯಿ- ಹತ್ತಿ ಬೆಳೆಯ ಮಧ್ಯೆ ಅಕ್ರಮವಾಗಿ ಬೆಳೆದಿದ್ದ ಅಂದಾಜು 7.20 ಲಕ್ಷ ರೂ.ಗಳ ಮೌಲ್ಯದ ಗಾಂಜಾ ಗಿಡಗಳನ್ನ ಸಂಡೂರಿನ ಅಬಕಾರಿ ನಿರೀಕ್ಷಕರು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಹೊಸಪೇಟೆ ವಿಭಾಗದ ಅಬಕಾರಿ ಇಲಾಖೆ ಜಂಟಿ ಆಯುಕ್ತರ ಸೂಚನೆಯ ಮೇರೆಗೆ ಸಂಡೂರಿನ ಅಬಕಾರಿ ನಿರೀಕ್ಷಕಿಯಾದ ಸಿ.ಜ್ಯೋತಿನಾಯ್ಕ ಅವರ ನೇತೃತ್ವದ ತಂಡವು ಖಚಿತ ಮಾಹಿತಿಯನ್ನಾಧರಿಸಿ ರೈತರಾದ ದೇವಣ್ಣ ಮತ್ತು ಬಾಲಯ್ಯ ಎಂಬುವರ ಹೊಲಗಳಲ್ಲಿ ಬೆಳೆದಿದ್ದ ಅಕ್ರಮ ಗಾಂಜಾ ಬೆಳೆಯನ್ನ ಜಪ್ತಿಗೊಳಿಸಿದ್ದಾರೆ.

ಅಕ್ರಮವಾಗಿ ಬೆಳೆದಿದ್ದ ಅಂದಾಜು 31 ಗಾಂಜಾ ಗಿಡಗಳನ್ನ ಬೆಳೆದಿದ್ದು, ಒಟ್ಟು 49 ಕೆಜಿ 240 ಗ್ರಾಂನಷ್ಟು ಬೆಳೆಯನ್ನ ಸೀಜ್ ಮಾಡಲಾಗಿದೆ. ಆ ಹೊಲಗಳ ಮೂಲ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿತರು ಪರಾರಿಯಾಗಿದ್ದಾರೆ. ಅವರ ಪತ್ತೆ ಕಾರ್ಯವನ್ನ ನಡೆಸಲಾಗುತ್ತಿದೆ ಎಂದು ಅಬಕಾರಿ ನಿರೀಕ್ಷಕಿ ಜ್ಯೋತಿ ಸಿ.ನಾಯ್ಕ ತಿಳಿಸಿದ್ದಾರೆ.

ABOUT THE AUTHOR

...view details