ಬಳ್ಳಾರಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತುಂಗಾಭದ್ರ ಮೈಲಾರ ಸೇತುವೆ ಹಾಗೂ ನಂದಿಗಾವಿ ಬಳಿ ಕಬ್ಬಿಣದ ತೆಪ್ಪ ಬಳಸಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಅಕ್ರಮ ಮರುಳು ದಂಧೆ ಅಡ್ಡೆ ಮೇಲೆ ಪೊಲೀಸರ ದಾಳಿ : 25 ತೆಪ್ಪಗಳು ವಶ - ಹಿರೇಹಡಗಲಿ ಪೊಲೀಸ್ ಠಾಣೆ
ಹಗಲಿನಲ್ಲಿ ಪೊಲೀಸರು ದಾಳಿಗೆ ಮುಂದಾದ ಕೂಡಲೇ ಆರೋಪಿಗಳು ಈಜಿ ಪರಾರಿಯಾಗುತ್ತಿದ್ದಾರೆ. ಅಧಿಕಾರಿಗಳ ಕಾಟಕ್ಕೆ ಮರಳು ದಂಧೆಕೋರರು ರಾತ್ರಿವೇಳೆ ಮರಳು ಲೂಟಿಗೆ ನಿಂತಿದ್ದಾರೆ..
![ಅಕ್ರಮ ಮರುಳು ದಂಧೆ ಅಡ್ಡೆ ಮೇಲೆ ಪೊಲೀಸರ ದಾಳಿ : 25 ತೆಪ್ಪಗಳು ವಶ Police raid on illegal sand smugglers](https://etvbharatimages.akamaized.net/etvbharat/prod-images/768-512-11079253-thumbnail-3x2-vis.jpg)
ಅಕ್ರಮ ಮರುಳು ದಂಧೆ ಅಡ್ಡೆ ಮೇಲೆ ಪೊಲೀಸರ ದಾಳಿ
ಜಿಲ್ಲೆಯ ಮರಳು ಅಕ್ರಮ ದಂಧೆಕೋರರು ಅವ್ಯಹತವಾಗಿ ಹೂವಿನ ಹಡಗಲಿ ಭಾಗದ ಮರಳನ್ನು ಲೂಟಿ ಮಾಡುತ್ತಿದ್ದಾರೆ. ಈ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ, ಹರಪನಹಳ್ಳಿ ಡಿವೈಎಸ್ಪಿ ಹಾಗೂ ಹೂವಿನಹಡಗಲಿ ಸಿಪಿಐ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.
ಹಗಲಿನಲ್ಲಿ ಪೊಲೀಸರು ದಾಳಿಗೆ ಮುಂದಾದ ಕೂಡಲೇ ಆರೋಪಿಗಳು ಈಜಿ ಪರಾರಿಯಾಗುತ್ತಿದ್ದಾರೆ. ಅಧಿಕಾರಿಗಳ ಕಾಟಕ್ಕೆ ಮರಳು ದಂಧೆಕೋರರು ರಾತ್ರಿವೇಳೆ ಮರಳು ಲೂಟಿಗೆ ನಿಂತಿದ್ದಾರೆ. ಸಾಕಷ್ಟು ಬಾರಿ ದಾಳಿ ಮಾಡಿದರೂ ಸಹ ಒಬ್ಬ ಆರೋಪಿಯೂ ಸಿಕ್ಕಿಲ್ಲ. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.