ಬಳ್ಳಾರಿ:ಗಣಿನಾಡು ಬಳ್ಳಾರಿ ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹಿನ್ನೆಲೆ ಕೆಲವೊಂದು ಮುಖ್ಯ ರಸ್ತೆಗಳು ಬಂದಾಗಿವೆ. ಆದ್ರೆ ಆಂಬ್ಯುಲೆನ್ಸ್ಗಳಿಗೆ ದಾರಿ ಮಾಡಿಕೊಡಬೇಕಾದ ಪೊಲೀಸರೇ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಆಂಬ್ಯುಲೆನ್ಸ್ಗೆ ದಾರಿ ಬಿಡದೆ ಅನ್ಯ ಮಾರ್ಗದಿಂದ ತೆರಳುವಂತೆ ಸೂಚಿಸಿದ್ದಾರೆ.
ಚುನಾವಣೆ ಫಲಿತಾಂಶ ಹಿನ್ನೆಲೆ ನಿನ್ನೆ ಸಂಜೆಯಿಂದಲೇ ಸರ್ಕಾರಿ ಪಾಲಿಟ್ನಿಕ್ ಕಾಲೇಜ್ ರಸ್ತೆ ಸಂಪೂರ್ಣ ಬಂದ್ ಮಾಡಿದ್ದಾರೆ. ಕಾಲೇಜ್ ಮುಂಭಾಗದಿಂದ ಜಿಲ್ಲಾಸ್ಪತ್ರೆಗೆ ತೆರಳಬೇಕಾಗಿದ್ದ ಆಂಬ್ಯುಲೆನ್ಸ್ವೊಂದನ್ನು ಪೊಲೀಸರು ತಡೆ ಹಿಡಿದಿದ್ದಾರೆ. ರಸ್ತೆ ಬಂದ್ ಆಗಿದೆ, ನೀವು ಅನ್ಯ ಮಾರ್ಗದಿಂದ ತೆರಳುವಂತೆ ಪೊಲೀಸರು ಚಾಲಕನಿಗೆ ಹೇಳಿದ್ದಾರೆ. ಆಂಬ್ಯುಲೆನ್ಸ್ ಚಾಲಕ ಅನ್ಯ ಮಾರ್ಗದಿಂದ ಆಸ್ಪತ್ರೆಗೆ ತೆರಳಿದ್ದಾನೆ.