ಕರ್ನಾಟಕ

karnataka

By

Published : Apr 2, 2021, 5:03 PM IST

ETV Bharat / state

ಬಳ್ಳಾರಿಯಲ್ಲಿ ಪೊಲೀಸ್ ಧ್ವಜ ದಿನ ಆಚರಣೆ.. ಜನರ ಕಷ್ಟಗಳಿಗೆ ಸದಾ ಸ್ಪಂದಿಸುತ್ತೇವೆಂದ ಐಜಿಪಿ

ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಪೊಲೀಸ್ ಧ್ವಜ ಮಾರಾಟ ಮಾಡುವುದರಿಂದ ಹಣ ಸಂಗ್ರಹವಾಗುತ್ತೆ. ಅದರಲ್ಲಿ ಶೇ.50ರಷ್ಟು ಹಣವನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಗೆ ನೀಡುವ ಮೂಲಕ ಅವರಿಗೆ ನೆರವು ನೀಡಲಾಗುವುದು..

Police Flag Day Celebration in Bellary
ಬಳ್ಳಾರಿಯಲ್ಲಿ ಪೊಲೀಸ್ ಧ್ವಜ ದಿನ ಆಚರಣೆ

ಬಳ್ಳಾರಿ: ಪೊಲೀಸ್ ಇಲಾಖೆ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗುತ್ತಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಎಂ. ನಂಜುಂಡಸ್ವಾಮಿ ಅವರು ಹೇಳಿದರು.

ಪೊಲೀಸ್ ಧ್ವಜ ದಿನಾಚರಣೆ

ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯುತು ಮೈದಾನದಲ್ಲಿಂದು ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೊಲೀಸರಿಗೆ ಸಮಾಜದಲ್ಲಿ ಗೌರವವಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನ ಇಲಾಖೆ ಮಾಡುತ್ತಿದೆ ಎಂದರು.

ಪೊಲೀಸ್ ಇಲಾಖೆಗೆ ಎರಡೇ ಎರಡು ಹಬ್ಬಗಳು. ಒಂದು ಬಾವುಟದ ಹಬ್ಬ, ಮತ್ತೊಂದು ಬಾವುಟ ಎತ್ತರಕ್ಕೆ ಹಾರಲಿ ಎಂದು ಹೋರಾಟ ಮಾಡಿ ಪ್ರಾಣಗಳನ್ನು ಬಲಿ ಕೊಟ್ಟ ಹುತಾತ್ಮರ ದಿನಾಚರಣೆಯ ಹಬ್ಬ. ಇವೆರಡು ಹಬ್ಬಗಳಿಗೆ ಪೊಲೀಸ್ ಇಲಾಖೆಯವರು ತಪ್ಪದೇ ಭಾಗವಹಿಸಬೇಕು.

ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಬದಿಗಿಟ್ಟು ಸಾರ್ವಜನಿಕರ ಸೇವೆಯಲ್ಲಿ ನಿರತರಾಗುವ ಕಾರ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ಮನಸ್ಸಿಗೆ ನೆಮ್ಮದಿ ನೀಡುವ ಕೆಲಸ ಇದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾತಾನಾಡಿ, ಪೊಲೀಸ್ ಇಲಾಖೆ ಇತರೆ ಇಲಾಖೆಗಳಗಿಂತ ವಿಭಿನ್ನ.

ವಿರಾಮವಿಲ್ಲದೆ ದುಡಿಯುವ ಇಲಾಖೆಯಾಗಿದೆ. ಅತ್ಯಂತ ಕ್ಲಿಷ್ಟಕರ ಸಮಯದಲ್ಲಿ ಜನರ ರಕ್ಷಣೆಗೆ ನಿಲ್ಲುವ ಒಂದು ಉತ್ತಮ ಕೆಲಸ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಆಗುತ್ತಿದೆ. ದೇಶದ ರಕ್ಷಣೆಗಾಗಿ ಗಡಿ ಕಾಯುವ ಸೈನಿಕರಂತೆ ಸಮಾಜದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಮಹತ್ವದ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ ಎಂದರು‌.

ಇದನ್ನೂ ಓದಿ:ಇದೇ ಮೊದಲು ಬ್ರಾಹ್ಮಿಮುಹೂರ್ತದಲ್ಲಿ ಶ್ರೀ ಶರಣ ಬಸವೇಶ್ವರರ ಜಾತ್ರೆ ಸರಳ.. ರಥೋತ್ಸವಕ್ಕೆ ಭಕ್ತರು ವಿರಳ

ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಪೊಲೀಸ್ ಧ್ವಜ ಮಾರಾಟ ಮಾಡುವುದರಿಂದ ಹಣ ಸಂಗ್ರಹವಾಗುತ್ತೆ. ಅದರಲ್ಲಿ ಶೇ.50ರಷ್ಟು ಹಣವನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಗೆ ನೀಡುವ ಮೂಲಕ ಅವರಿಗೆ ನೆರವು ನೀಡಲಾಗುವುದು.

ಈಗಾಗಲೇ 3.75 ಲಕ್ಷ ರೂ. ಹಣವನ್ನು ಪೊಲೀಸ್ ಇಲಾಖೆಯ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಕರ್ತವ್ಯ ನಿರ್ವಹಿಸುತ್ತಿರುವವರ ಮಕ್ಕಳ ವಿದ್ಯಾಭ್ಯಾಸದ ನಿಧಿಗೆ ನೀಡಲಾಗಿದೆ ಎಂದರು. ಇನ್ನು,1-4-2020 ರಿಂದ 31-3-2021ರವರೆಗೆ ನಿವೃತ್ತಿಯಾದ 9 ಪಿಎಸ್​ಐ,18 ಎಎಸ್​ಐ, ಒಬ್ಬರು ಮಹಿಳಾ ಎಎಸ್​ಐ, 4 ಹೆಡ್ ಕಾನ್ಸ್​​ಟೇಬಲ್, 6 ಎಆರ್​​ಎಸ್​ಐ, 2 ಎಹೆಚ್​ಸಿ ಅಧಿಕಾರಿಗಳು ಸೇರಿ ಒಟ್ಟು 40 ಪೊಲೀಸ್ ಅಧಿಕಾರಿಗಳನ್ನು ಈ ಸಮಯದಲ್ಲಿ ಸನ್ಮಾನಿಸಲಾಯಿತು‌.

ABOUT THE AUTHOR

...view details