ಬಳ್ಳಾರಿ:ನಗರದ ಪ್ರಮುಖ ಸಾರ್ವಜನಿಕ ಸಂಚಾರದ ರಸ್ತೆಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳು ಕಣ್ಮುಚ್ಚಿವೆ. ಹೀಗಾಗಿ, ಸಾರ್ವಜನಿಕ ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತಾದ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಹೆಣಗಾಡುತ್ತಿದೆ.
ಅತ್ಯಾಧುನಿಕ ಕ್ಯಾಮರಾ ಅಳವಡಿಕೆಗೆ ಪೊಲೀಸ್ ಇಲಾಖೆ ಚಿಂತನೆ ಹೌದು, ನಗರದ ಪ್ರಮುಖ ರಸ್ತೆಗಳಾದ ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಇಂದಿರಾ ವೃತ್ತ, ಡಾ.ರಾಜ್ ರಸ್ತೆ, ಎಸ್ಪಿ ವೃತ್ತ, ಮೋತಿ ವೃತ್ತ ಸೇರಿದಂತೆ ನಾನಾ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟುಹೋಗಿವೆ. ಇದಲ್ಲದೇ, ಕ್ಯಾಮರಾಗಳ ಸೆನ್ಸಾರ್ ಕೂಡ ದುರಸ್ತಿಯಲ್ಲಿವೆ. ಹಾಗಾಗಿ, ಸಾರ್ವಜನಿಕ ಸಂಚಾರಿ ನಿಯಮದ ಉಲ್ಲಂಘನೆಯ ಕುರಿತಾದ ಪತ್ತೆಗೆ ಸಂಚಾರಿ ಠಾಣೆಯ ಪೊಲೀಸರಿಗೆ ತೊಂದರೆಯಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿ, ಮಹಾನಗರ ಪಾಲಿಕೆ ಆಯುಕ್ತರಿಗೆ ಅತ್ಯಾಧುನಿಕ ಸಿಸಿಟಿವಿಗಳ ಖರೀದಿಗೆ ಅಗತ್ಯ ಅನುದಾನ ನೀಡುವಂತೆ ಕೋರಿದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಓದಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಕ್ಕೆ ಸಕಲ ಸಿದ್ಧತೆ... ‘ಚಾಣಕ್ಯ’ನಿಂದ ಶಮನವಾಗುತ್ತಾ ಶಾಸಕರ ಅಸಮಾಧಾನ!?
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆಯಿಂದ ಅಂದಾಜು ಎರಡು ಕೋಟಿ ರೂ.ಗಳ ಅನುದಾನದ ಭರವಸೆ ನೀಡಿದ್ದಾರೆ. ಆ ಅನುದಾನದಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾಗಳ ಖರೀದಿಗೆ ಚಿಂತನೆ ನಡೆಸಲಾಗಿದೆ. ರಾತ್ರಿ ವೇಳೆಯಲ್ಲೂ ಕೂಡ ಸಂಚಾರಿ ನಿಯಮ ಉಲ್ಲಂಘನೆ ಮಾಡಿದೋರ ವಾಹನ ಹಾಗೂ ವಾಹನದ ಸಂಖ್ಯೆಯನ್ನೂ ಸೆರೆ ಹಿಡಿಯೋದಕ್ಕೆ ಈ ಕ್ಯಾಮರಾಗಳು ಸಹಕಾರಿಯಾಗಲಿವೆ. ನೂರು ಮೀಟರ್ ನಷ್ಟು ದೂರದಲ್ಲಿ ಚಲಿಸುತ್ತಿರುವ ವಾಹನಗಳನ್ನೂ ಕೂಡ ಈ ಕ್ಯಾಮರಾಗಳು ಸೆರೆಯಾಗಿತ್ತದೆ ಎಂದು ತಿಳಿಸಿದರು.