ಬಳ್ಳಾರಿ: ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಇಡಿ ದೇಶವೇ ಲಾಕ್ ಡೌನ್ ಆಗಿದೆ. ಹಳ್ಳಿಯಲ್ಲಿ ಇರುವ ಸಾರ್ವಜನಿಕರು ಸರ್ಕಾರದ ನೀತಿ, ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹಾಗೂ ಹವ್ಯಾಸಿ ಬರಹಗಾರ ಸ್ವರೂಪಾನಂದ ಎಂ. ಕೊಟ್ಟೂರು ಜಾಗೃತಿ ಮೂಡಿಸಿದರು.
ಹಳ್ಳಿಯ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಿದ ಪೊಲೀಸ್ ಪೇದೆ
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಹಾಗೂ ಹವ್ಯಾಸಿ ಬರಹಗಾರ ಸ್ವರೂಪಾನಂದ ಎಂ. ಕೊಟ್ಟೂರು ಅವರು ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
jagruthi
ಸಾರ್ವಜನಿಕರು ಸರಕಾರದ ಆದೇಶ ಮತ್ತು ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿ. ಕೊರೊನಾ ಸೊಂಕನ್ನು ನಿರ್ಭಂಧಿಸಿ ಎಂದು ಜನರಿಗೆ ಕರೆ ನೀಡಿದರು.
ಸ್ವರೂಪಾನಂದ ಅವರು ಸಂಡೂರು ತಾಲೂಕಿನ ನಿಡಗುರ್ತಿ ಮಲ್ಲಾಪುರ ಮತ್ತು ಕೊಂಡಾಪುರ ಗ್ರಾಮಗಳಲ್ಲಿ ಕೊರೊನಾ ವೈರಸ್ನ ಕುರಿತಾಗಿ ಜಾಗೃತಿ ಮೂಡಿಸುವ ಮೂಲಕ ಜನರಲ್ಲಿ ಈ ವೈರಸ್ ಹರಡುವ ಬಗೆ, ರೋಗ ಲಕ್ಷಣಗಳು, ಅದಕ್ಕೆ ಏನೇನು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದರು.