ಕರ್ನಾಟಕ

karnataka

ETV Bharat / state

ವೈದ್ಯರನ್ನು ಬೆದರಿಸಿ ಹಲ್ಲೆ ಮಾಡಿದ ಆರೋಪ: ಓರ್ವನ ಬಂಧನ - ಕೂಡ್ಲಿಗಿಯಲ್ಲಿ ಪತ್ರಕರ್ತನ ಬಂಧನ

ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಕೂಡ್ಲಿಗಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

Police arrest Journalist who assaulted Doctor
ವೈದ್ಯ ಮೇಲೆ ಹಲ್ಲೆ ಮಾಡಿ ಪತ್ರಕರ್ತ

By

Published : May 19, 2021, 8:19 AM IST

Updated : May 19, 2021, 9:40 AM IST

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕು ಹನಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಹಣಕ್ಕಾಗಿ ಬೆದರಿಕೆ ಹಾಕಿ, ಹಲ್ಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 16ರಂದು ಹನಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಅರುಣ್ ಕುಮಾರ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಗ್ರಾಮದ ಮಂಜುನಾಥ್ ಎಂಬಾತ ಆಸ್ಪತ್ರೆಯೊಳಗೆ ಅಕ್ರಮ ಪ್ರವೇಶ ಮಾಡಿ ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿಲಾಗಿದೆ. ಆಸ್ಪತ್ರೆಯೊಳಗೆ ನುಗ್ಗಿದ ಮಂಜುನಾಥ್, ನಾನು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷ, ಪತ್ರಕರ್ತ, ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ, ನೀನು ಇಲ್ಲಿ ಕೆಲಸ ಮಾಡಬೇಕೆಂದರೆ ಪ್ರತಿ ತಿಂಗಳು ನನಗೆ ಹಣ ನೀಡಬೇಕು. ಇಲ್ಲವೆಂದರೆ ಟ್ರಾನ್ಸ್​ಫರ್ ಮಾಡಿಸಿಕೊಂಡು ಹೋಗು ಎಂದು ವೈದ್ಯರಿಗೆ ಬೈದು, ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟನೆ

ಓದಿ : ಕೋವಿಡ್​ ನಿಯಮ ಉಲ್ಲಂಘಿಸಿದ ಕ್ಲಿನಿಕ್ ಕ್ಲೋಸ್: ಹೆಚ್ಚು ಸ್ಟಿರಾಯ್ಡ್​ ಬಳಕೆ ಆರೋಪ

ಅಲ್ಲದೆ, ಟೇಬಲ್ ಗ್ಲಾಸ್ ಒಡೆದು ಹಾಕಿ, ಕಚೇರಿಯ ಕಂಪ್ಯೂಟರ್ ಉಪಕರಣಗಳನ್ನು ಹಾಳುಗೆಡವಿದ್ದಾನೆ ಎಂದು ವೈದ್ಯರು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವ ಕೂಡ್ಲಿಗಿ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Last Updated : May 19, 2021, 9:40 AM IST

ABOUT THE AUTHOR

...view details