ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಹೊರವಲಯದಬಂಕ್ವೊಂದರಲ್ಲಿ ಬಾಟಲಿಯೊಳಗೆ ಪೆಟ್ರೋಲ್ ತುಂಬಿಸಿಕೊಂಡಾಗ ಮುಕ್ಕಾಲು ಭಾಗ ಮಾತ್ರ ತುಂಬಿದ್ದು, ಇನ್ನೂ ಕಾಲು ಭಾಗ ಖಾಲಿ ಇರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಬಂಕ್ನಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಪೆಟ್ರೋಲ್ ಹಾಕ್ಸೋ ಮುನ್ನ ಜೀರೊ ನೋಡ್ರಿ... ಬಳ್ಳಾರಿಯ ಈ ಬಂಕ್ನಲ್ಲಿ ಎಂಥ ಮೋಸ ನಡೆದಿದೆ ನೋಡಿ - ಬಳ್ಳಾರಿಯಲ್ಲಿ ಬಂಕ್ ನ ಮಾಲೀಕರನ್ನ ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಹಕರು
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಹೊರವಲಯದ ಬಂಕ್ವೊಂದರಲ್ಲಿ ಬಾಟಲಿಯೊಳಗೆ ಪೆಟ್ರೋಲ್ ತುಂಬಿಸಿಕೊಂಡಾಗ ಮುಕ್ಕಾಲು ಭಾಗ ಮಾತ್ರ ತುಂಬಿದ್ದು, ಇನ್ನೂ ಕಾಲು ಭಾಗ ಖಾಲಿ ಇರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಬಂಕ್ನಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಗಣಿನಾಡಿನ ಪೆಟ್ರೋಲ್ ಬಂಕ್ಗಳಲ್ಲಿ ಮಹಾಮೋಸ : ಲೀಟರ್ ಪೆಟ್ರೋಲ್ಗೂ ಕನ್ನ.!
ಪೆಟ್ರೋಲ್ ಹಾಕುವಾಗ ರೀಡಿಂಗ್ಶೂನ್ಯದಿಂದ ಶುರು ಆಗಬೇಕು. ಆದ್ರೆ, ಇಲ್ಲಿ ಶುರುವಾಗಿದ್ದು 11 ರೂ. ನಿಂದ ಎಂದು ಗ್ರಾಹಕರು ಆರೋಪಿಸಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೆ ಸಬೂಬು ನೀಡುವ ಮಾಲೀಕರು ಮಷಿನ್ ಸರಿಯಾಗಿಲ್ಲ ಅದನ್ನು ರಿಪೇರಿಗೆ ಕಳಿಸುತ್ತೇವೆ ಎಂದು ಹೇಳಿ ಜಾರಿಕೊಂಡಿದ್ದಾರೆ.