ಬಳ್ಳಾರಿ:ಜಿಲ್ಲೆಯ ಸಂಡೂರು ನಗರ ವ್ಯಾಪ್ತಿಯ ಕೃಷ್ಣಾನಗರದಲ್ಲಿ ಮೊಹರಂ ಹಬ್ಬದ ನಿಮಿತ್ತ ರಾತ್ರಿ ಆಚರಣೆ ವೇಳೆ ಯುವಕನ ಕತ್ತಿಗೆ ದುಷ್ಕರ್ಮಿಗಳು ಬ್ಲೇಡ್ ಹಾಕಿ ಮಾರಾಣಾಂತಿಕ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಮೊಹರಂ ಆಚರಣೆ ವೇಳೆ ಯುವಕನ ಕತ್ತಿಗೆ ಬ್ಲೇಡ್ ಹಾಕಿದ ದುಷ್ಕರ್ಮಿಗಳು! - attacked a young man
ಮೊಹರಂ ಹಬ್ಬದ ಪ್ರಯುಕ್ತ ರಾತ್ರಿ ಆಚರಣೆಯಲ್ಲಿ ತೊಡಗಿದ್ದ ಯುವಕನಿಗೆ ಗೌಸ್ ಸೇರಿದಂತೆ ಇನ್ನಿತರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ವ್ಯಕ್ತಿ
ಈ ಗಲಾಟೆಯಲ್ಲಿ ಕೃಷ್ಣಾನಗರದ ನಿವಾಸಿ ಕುಮಾರ ಎಂಬುವರ ಮೇಲೆ ಗೌಸ್ ಸೇರಿದಂತೆ ಇನ್ನಿತರರು ಹಲ್ಲೆ ಮಾಡಿ, ಆತನ ಕತ್ತಿಗೆ ಬ್ಲೇಡ್ ಹಾಕಿದ್ದಾರೆ. ಗಂಭೀರ ಗಾಯಗೊಂಡ ಕುಮಾರನಿಗೆ ಸಂಡೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೌಸ್ ಮತ್ತಿತರ ಆರೋಪಿಗಳನ್ನು ಸಂಡೂರು ಪೋಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಕುಮಾರ, ಸಂಡೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ.