ಕರ್ನಾಟಕ

karnataka

ETV Bharat / state

ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಮಾಡಿಸಿದ್ದೇನು ಗೊತ್ತಾ?

ಬಳ್ಳಾರಿ ನಗರದಲ್ಲಿ ಮಾಸ್ಕ್​ ಹಾಕದೇ ತಿರುಗಾಡುತ್ತಿದ್ದವರಿಗೆ ಪೊಲೀಸರು ಅವರ ಅಂಗಿ ಬಿಚ್ಚಿಸಿ ಬನಿಯನ್​ನನ್ನೇ ಮಾಸ್ಕ್​ ರೀತಿ ಕಟ್ಟಿಸಿ ಕಳಿಸಿದ್ದಾರೆ.

people-who-were-unnecessarily-roaming-on-road-were-punished
ಅನಗತ್ಯವಾಗಿ ಓಡಾಡುತ್ತಿದ್ದರಿಗೆ ಕಪ್ಪೆಯಂತೆ ಜಿಗಿಸಿದ ಪೊಲೀಸರು

By

Published : Mar 28, 2020, 4:14 PM IST

ಬಳ್ಳಾರಿ: ನಗರದ ರಾಯಲ್​ ವೃತ್ತದಲ್ಲಿ ಮಾಸ್ಕ್​ ಹಾಕದೇ ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಸಾರ್ವಜನಿರಿಗೆ ಪೊಲೀಸರು ಲಾಠಿ ಏಟು ನೀಡದೇ ಕಪ್ಪೆ ಜಿಗಿತ, ಬಸ್ಕಿ ಹೊಡೆಸಿ ಜಾಗೃತಿ ಮೂಡಿಸಿ ಕಳಿಸಿದ್ದಾರೆ.

ಅನಗತ್ಯವಾಗಿ ಓಡಾಡುತ್ತಿದ್ದರಿಗೆ ಕಪ್ಪೆಯಂತೆ ಜಿಗಿಸಿದ ಪೊಲೀಸರು

ಅಲ್ಲದೇ ಮಾಸ್ಕ್​ ಹಾಕದೇ ತಿರುಗಾಡುತ್ತಿದ್ದವರಿಗೆ ಅವರದ್ದೇ ಅಂಗಿ ಬಿಚ್ಚಿಸಿ ಬನಿಯನ್​ನನ್ನೇ ಮಾಸ್ಕ್​ ರೀತಿಯಲ್ಲಿ ಕಟ್ಟಿಸಿದರೆ, ಇನ್ನು ಕೆಲವರು ಪ್ಲಾಸ್ಟಿಕ್ ಕವರ್​ಗಳನ್ನು ಮುಖಕ್ಕೆ ಕಟ್ಟಿಕೊಂಡು ಹೋಗಿದ್ದಾರೆ.

ಈ ವೇಳೆ, ಡಿವೈಎಸ್ಪಿ ಕೆ. ರಾಮರಾವ್, ಸಿಪಿಐ ಗಾಯತ್ರಿ, ಪಿ.ಎಸ್.ಐ ವೈಶಾಲಿ, ಸದ್ದಾಂ ಹುಸೇನ್, ನಾರಾಯಣ, ಗುರುರಾಜ್ ಹಾಗೂ ಶಾಂತಮೂರ್ತಿ, ಬೀರಪ್ಪ ಹಾಗೂ ಸಂಚಾರಿ ಠಾಣೆಯ ಪೊಲಿಸ್ ಪೇದೆ ಕೆಂಚಪ್ಪ ಹಾಜರಿದ್ದರು.

ABOUT THE AUTHOR

...view details