ಬಳ್ಳಾರಿ:ಜಿಲ್ಲೆಯ ಶ್ರೀ ರಾಮಾಂಜನೇಯ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಸಾರ್ವಜನಿಕರಿಗೆ ಏಪ್ರಿಲ್ ಮತ್ತು ಮೇ ತಿಂಗಳ ಅಕ್ಕಿ ಹಾಗೂ ಗೋಧಿ ವಿತರಿಸಲಾಯಿತು.
ಬಾಕ್ಸ್ಗಳಲ್ಲಿ ಜನರ ಬದಲು ಚೀಲಗಳ ಸರತಿ... ಯಾಕೆ ಗೊತ್ತಾ!? - ನ್ಯಾಯಬೆಲೆ ಅಂಗಡಿ ಮುಂದೆ ನಿಂತು ಬಸವಳಿದ ಜನ
ಲಾಕ್ಡೌನ್ ಹಿನ್ನೆಲೆ ಗಣಿನಾಡು ಬಳ್ಳಾರಿ ಗ್ರಾಮಾಂತರದಲ್ಲಿ ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಹಾಗೂ ಗೋಧಿಯನ್ನ ವಿತರಿಸಲಾಯಿತು. ಆದ್ರೆ ಬಿಸಿಲಿನ ಪ್ರಮಾಣ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರಿಂದ ಸರತಿ ಸಾಲಿನ ಬಾಕ್ಸ್ನಲ್ಲಿ ಚೀಲಗಳನ್ನು ಇಟ್ಟು ಮರದ ನೆರಳಿನಲ್ಲಿ ಜನ ವಿಶ್ರಮಿಸಿದ ದೃಶ್ಯ ಕಂಡುಬಂತು.
ನ್ಯಾಯಬೆಲೆ ಅಂಗಡಿ ಮುಂದೆ ನಿಂತು ಬಸವಳಿದ ಜನ
ಕುಟುಂಬದ ಒಬ್ಬರಿಗೆ10 ಕೆಜಿ ಅಕ್ಕಿ ( ಎರಡು ತಿಂಗಳಿಗೆ 20 ಕೆಜಿ), ಗೋಧಿ ಒಂದು ಕುಟುಂಬಕ್ಕೆ 2 ಕೆಜಿ ( ಎರಡು ತಿಂಗಳಿಗೆ 4 ಕೆಜಿ) ವಿತರಣೆ ಮಾಡಲಾಯಿತು.