ಹೊಸಪೇಟೆ(ಬಳ್ಳಾರಿ):ಜಿಲ್ಲೆಯ ಹೊಸಪೇಟೆ ತಾಲೂಕಿನ 23ನೇ ವಾರ್ಡ್ನ ಕಾರಿಗನೂರು ಗ್ರಾಮದ ಶಾಲೆಯಲ್ಲಿ ನೂರಾರು ಜನರು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ನೀಡುವ ರೇಷನ್ಗಾಗಿ ಮುಗಿಬಿದ್ದರು.
ಸಚಿವರ ರೇಷನ್ ಕಿಟ್ಗಾಗಿ ಮುಗಿಬಿದ್ದರು ಜನ..! - Kariganur, 23rd Ward of Hospet Taluk
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ 23ನೇ ವಾರ್ಡ್ನ ಕಾರಿಗನೂರು ಗ್ರಾಮದ ಶಾಲೆಯಲ್ಲಿ 2 ಸಾವಿರ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಲಾಗಿದೆ ಎಂದು ಸ್ವಯಂ ಸೇವಕರೊಬ್ಬರು ದೂರವಾಣಿ ಮೂಲಕ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಶಾಸಕ ಆನಂದ್ ಸಿಂಗ್ ನೀಡುವ ರೇಷನ್ ಕಿಟ್ಗಾಗಿ ಮುಗಿಬಿದ್ದ ಜನರು..!
ಕಾರಿಗನೂರು ಗ್ರಾಮದ ಶಾಲೆಯಲ್ಲಿ ರೇಷನ್ ಕಿಟ್ಗಾಗಿ ತಮ್ಮ ಬಿಪಿಎಲ್ ಮತ್ತು ಅಂತ್ಯೋದಯ ಯೋಜನೆ ಚೀಟಿ ಹಿಡಿದುಕೊಂಡು ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ ಮುಗಿ ಬಿದ್ದಿದ್ದರು. ಬಳಿಕ, ಪೊಲೀಸರು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬುದ್ದಿ ಹೇಳಿ ಜನರನ್ನ ನಿಯಂತ್ರಿಸಿದ್ರು.
23ನೇ ವಾರ್ಡ್ನ ಕಾರಿಗನೂರು ಗ್ರಾಮದಲ್ಲಿ 2 ಸಾವಿರ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಲಾಗಿದೆ ಎಂದು ಸ್ವಯಂ ಸೇವಕರೊಬ್ಬರು ದೂರವಾಣಿ ಮೂಲಕ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
Last Updated : Apr 18, 2020, 4:40 PM IST