ಬಳ್ಳಾರಿ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಏಕರೂಪದ ಆರೋಗ್ಯ ಸೇವೆಯನ್ನು ಗಣಿನಾಡು ಬಳ್ಳಾರಿ ಜಿಲ್ಲೆಯ ಸಾವಿರಾರು ಮಂದಿ ಫಲಾನುಭವಿಗಳು ಸೌಲಭ್ಯ ಪಡೆಯುವ ಮುಖೇನ ಮುಂಚೂಣಿ ಸ್ಥಾನದಲ್ಲಿದ್ದಾರೆ.
ಯಶಸ್ವಿನಿ, ಹರೀಶ ಮುಖ್ಯಮಂತ್ರಿಗಳ ಸಾಂತ್ವನ, ವಾಜಪೇಯಿ ಆರೋಗ್ಯ ಯೋಜನೆ ಹೀಗೆ ಇನ್ನಿತರೆ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿನಡಿ ತರುವ ಮೂಲಕ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯಡಿ ಅಂದಾಜು 3802 ಫಲಾನುಭವಿಗಳು ಆರೋಗ್ಯ ಸೇವೆಯನ್ನು ಪಡೆದುಕೊಂಡಿದ್ದಾರೆ. ಅಂದಾಜು 1650 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಹಾಗೂ 9 ವಿಧದ ವೈದ್ಯಕೀಯ ಸೇವೆಗಳು ಈ ಯೋಜನೆ ಅಡಿ ಲಭ್ಯವಿದ್ದು, ಜಿಲ್ಲೆಯಾದ್ಯಂತ ಸರಿಸುಮಾರು 1.50ಲಕ್ಷಕ್ಕೂ ಅಧಿಕ ಮಂದಿ ಕರ್ನಾಟಕ ಆರೋಗ್ಯ ಯೋಜನೆ ಕಾರ್ಡುಗಳನ್ನು ಪಡೆದುಕೊಂಡಿದ್ದಾರೆ.