ಬಳ್ಳಾರಿ:ಗಣಿನಾಡಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಮಕ್ಕಳು, ಯುವಕರು, ಯುವತಿಯರು ಟೆಲಿಸ್ಕೋಪ್, ಸುರಕ್ಷಕ ಕನ್ನಡಕಗಳು, ಪಿನ್ ಹೋಲ್ ಕ್ಯಾಮರಾ ಹಾಗು ಬಾಲ್ ಮೀರರ್ಗಳ ಮೂಲಕ ಆಗಸದಲ್ಲಿ ನಡೆದ ಅಪರೂಪದ ಖಗೋಳ ಕೌತುಕವನ್ನು ಕಣ್ತುಂಬಿಕೊಂಡರು.
ವಿಜ್ಞಾನ ಕೇಂದ್ರದ ಕ್ಯುರೇಟರ್ ಶಿವಕುಮಾರ್ ಮಾತನಾಡಿ, ಸೂರ್ಯಗ್ರಹಣ ಬೆಳಿಗ್ಗೆ 10 ಗಂಟೆ 10 ನಿಮಿಷದಿಂದ ಮಧ್ಯಾಹ್ನ 1 ಗಂಟೆ 34 ನಿಮಿಷದವರೆಗೆ ನಡೆಯಿತು. ಈ ಸಮಯದಲ್ಲಿ ಬಳ್ಳಾರಿ ನಾಗರಿಕರಿಗೆ ಸುರಕ್ಷತಾ ಸಾಮಗ್ರಿಗಳ ಮೂಲಕ ಗ್ರಹಣ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಶೇ 44 ರಷ್ಟು ಗ್ರಹಣ ಗೋಚರಿಸಿದೆ ಎಂದರು.