ಬಳ್ಳಾರಿ :ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆ ರಾಜ್ಯವ್ಯಾಪಿ ಕೊರೊನಾ ಕರ್ಫ್ಯೂ ಜಾರಿಯಲ್ಲಿರೋದ್ರರಿಂದ, ದಿನ ಒಂದೊಂದು ಬಾಟಲ್ ಖರೀಸದಿ ಬದಲು, ಒಟ್ಟಿಗೆ ಮದ್ಯದ ಬಾಕ್ಸ್‌ಗಳನ್ನೇ ಖರೀದಿಸಲು ಜಿಲ್ಲೆಯ ಮದ್ಯಪ್ರಿಯರು ಮುಂದಾಗಿದ್ದಾರೆ.
ಕೊರೊನಾ ಕರ್ಫ್ಯೂ ಕಾರಣ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಈ ಮದ್ಯ ಖರೀದಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ದಿನವೂ ಮದ್ಯದ ಅಂಗಡಿಗಳಿಗೆ ಬಂದು ಖರೀದಿ ಮಾಡಲಿಕ್ಕಾಗದೇ ಒಂದೇ ಬಾರಿಗೆ ಮದ್ಯದ ಬಾಕ್ಸ್‌ಗಳನ್ನೇ ಖರೀದಿಸಲು ಮದ್ಯವ್ಯಸನಿಗಳು ಮುಂದಾಗಿದ್ದಾರೆ.
ಪದೇಪದೆ ಬಂದು ಬಾಟಲ್ ಖರೀದಿಸೋದಕ್ಕಿಂತ ಬಾಕ್ಸ್‌ಗಳನ್ನೇ ಕೊಂಡೊಯ್ಯುತ್ತಿರುವ 'ಗುಂಡ್'ಹೈಕ್ಳು.. ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳಿಂದ ಈ ಮದ್ಯಪ್ರಿಯರು ಮದ್ಯ ಖರೀದಿಗಾಗಿ ಬಳ್ಳಾರಿ ನಗರದ ಮದ್ಯದ ಅಂಗಡಿಗಳಿಗೆ ಬರೋದು ವಾಡಿಕೆಯಾಗಿದೆ. ಆದರೆ, ಈ ಸಮಯದಲ್ಲಿ ಪ್ರತಿದಿನ ಬರೋದು ಕಷ್ಟವಾಗಿರುವ ಕಾರಣ ಒಟ್ಟೊಟ್ಟಿಗೆ ಕೇಸ್ಗಟ್ಟಲೇ ಎಣ್ಣೆ ಖರೀದಿಸುತ್ತಿದ್ದಾರೆ.
ಒಂದೇ ಬಾರಿಗೆ ಬಾಕ್ಸ್ ಅನ್ನೇ ಖರೀದಿಸಿದರೆ ಅಂದಾಜು 15- 20 ದಿನಗಳವರೆಗೆ ಬಳ್ಳಾರಿ ನಗರಕ್ಕೆ ಬರೋದು ತಪ್ಪುತ್ತೆ ಎಂಬೋದನ್ನ ಮನದಟ್ಟು ಮಾಡಿಕೊಂಡ ಮದ್ಯವ್ಯಸನಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ.