ಹೊಸಪೇಟೆ :ಐತಿಹಾಸಿಕ ಹಂಪಿಯ ಯಂತ್ರೋದ್ಧಾರಕ ಪ್ರಾಚರ್ಯ ದೇವಾಲಯ ಪೇಜಾವರ ಶ್ರೀಗಳಿಗೆ ಪವಿತ್ರ ಸ್ಥಳ. ಹಿಂದು ಧರ್ಮದ ಕೇಂದ್ರ ಬಿಂದುವಾಗಿರುವ ಮಂದಿರದಲ್ಲಿ ತಮ್ಮ 8ನೇ ವಯಸ್ಸಿನಲ್ಲಿ ವೆಂಕಟರಮಣರನ್ನು ಕರೆಸಿಕೊಂಡು ದೀಕ್ಷೆಯನ್ನು ಪಡೆದುಕೊಂಡರು ಎಂದು ಹೇಳಲಾಗಿದೆ.
ಹಂಪಿಯ ಯಂತ್ರೋದ್ಧಾರಕ ಚಕ್ರತೀರ್ಥ ಸ್ಥಳದಲ್ಲಿ ದೀಕ್ಷೆ ಪಡೆದಿದ್ದರಂತೆ ಪೇಜಾವರ ಶ್ರೀಗಳು - ಬಳ್ಳಾರಿ ಸುದ್ದಿ
ಐತಿಹಾಸಿಕ ಹಂಪಿಯ ಯಂತ್ರೋದ್ಧಾರಕ ಪ್ರಾಚರ್ಯ ದೇವಾಲಯ ಪೇಜಾವರ ಶ್ರೀಗಳಿಗೆ ಪವಿತ್ರ ಸ್ಥಳ. ಹಿಂದು ಧರ್ಮದ ಕೇಂದ್ರ ಬಿಂದುವಾಗಿರುವ ಮಂದಿರದಲ್ಲಿ ತಮ್ಮ 8ನೇ ವಯಸ್ಸಿನಲ್ಲಿ ವೆಂಕಟರಮಣರನ್ನು ಕರೆಸಿಕೊಂಡು ದೀಕ್ಷೆಯನ್ನು ಪಡೆದುಕೊಂಡರು ಎಂದು ಹೇಳಲಾಗಿದೆ.
ಐತಿಹಾಸಿಕ ಹಂಪಿಯ ಪವಿತ್ರವಾದ ಈ ಸ್ಥಳವು ಸಾಧು ಸಂತರ ಭೂಮಿಯಾಗಿದೆ. ಅಲ್ಲದೆ ಇದು ವ್ಯಾಸರಾಯ ತೀರ್ಥರ ಭೂಮಿಯಾಗಿತ್ತು. ಯಂತ್ರೋದ್ಧಾರಕ ಮಂದಿರದ ಕೆಳ ಭಾಗದಲ್ಲಿ ರಾಮ ಲಕ್ಷ್ಮಣರ ದೇವಾಲಯವಿದೆ. ಹಿಂದೂ ಧರ್ಮದಲ್ಲಿ ನದಿಗೆ ಪವಿತ್ರವಾದ ಸ್ಥಾನ ಮಾನವನ್ನು ನೀಡಿದ್ದಾರೆ. ಅಂತಹ ಪವಿತ್ರ ನದಿಯಾದ ತುಂಗಾಭದ್ರ ನದಿಯ ಮಡಿಲಲ್ಲಿ ಪೇಜಾವರ ಶ್ರೀಗಳು ತಮ್ಮ ಗಟ್ಟಿ ನಿರ್ಧಾರದಿಂದ ವೆಂಕಟರಮಣಚಾರ್ಯರಿಂದ ಸನ್ಯಾಸತ್ವ ದೀಕ್ಷೆಯನ್ನು ಪಡೆದುಕೊಂಡರು. ಮಠಾಧೀಶರಾದ ವಿಶ್ವ ಮಾನ್ಯ ತೀರ್ಥರು ಆ ಸಮಯದಲ್ಲಿ ಸಂಚಾರವನ್ನು ಪ್ರಾರಂಭಿಸಿದ್ದರು.
ಪೇಜಾವರ ಶ್ರೀಗಳು ಉಡುಪಿ ಶ್ರೀ ಕೃಷ್ಣ ದೇವರ ಪರಮ ಭಕ್ತರಾಗಿದ್ದರು. ತಂದೆ ತಾಯಿ ಅವರನ್ನು ಪೂಜೆಗೆ ಕರೆದುಕೊಂಡು ಹೋದ ಸಮಯದಲ್ಲಿ ಅವರ ಭಕ್ತಿ ಮತ್ತು ಪೂಜಿಸುವುದನ್ನು ನೋಡಿದ್ದರು. ಆವಾಗಲೇ ಅವರಲ್ಲಿ ಅಷ್ಟೊಂದು ಅಗಾಧವಾಗಿ ದೇವರಲ್ಲಿ ನಂಬಿಕೆ ಇತ್ತು. ಅವರು ನಮ್ಮನ್ನು ಅಗಲಿದ್ದಕ್ಕೆ ತುಂಬಾ ದು:ಖವಾಗುತ್ತದೆ. ಅವರು ದೇಹದಿಂದ ದೂರವಿದ್ದಾರೆಯೇ ಹೊರತು ಮನಸ್ಸಿನಿಂದಲ್ಲ ಎಂದು ದೇವಾಲಯದ ಅರ್ಚಕ ಶ್ರೀನಾಥ ಅವರು ಹೇಳುತ್ತಾರೆ.