ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತ: 20 ಪಾದಚಾರಿಗಳು ಸೇರಿ 350 ಮಂದಿ ಕೊನೆಯುಸಿರು - ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್​

ಬಳ್ಳಾರಿ ಜಿಲ್ಲೆಯಲ್ಲಿ ಮೂರ್ನಾಲ್ಕು ವರ್ಷಗಳಲ್ಲಿ 1,100 ರಸ್ತೆ ಅಪಘಾತಗಳು ಸಂಭವಿಸಿದ್ದು, ಸುಮಾರು 350ಕ್ಕೂ ಅಧಿಕ ಮಂದಿ ಅಪಘಾತದಲ್ಲಿ ಅಸುನೀಗಿದ್ದಾರೆ.

SP Saidulu adavath
ಎಸ್ಪಿ ಸೈದುಲು ಅಡಾವತ್

By

Published : Feb 12, 2021, 1:06 PM IST

ಬಳ್ಳಾರಿ:ಜಿಲ್ಲಾದ್ಯಂತ ಮೂರ್ನಾಲ್ಕು ವರ್ಷಗಳಲ್ಲಿ 350ಕ್ಕೂ ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಪೈಕಿ 20 ಪಾದಚಾರಿಗಳು ಇದ್ದಾರೆ.

ಪಾದಚಾರಿಗಳು ಅಡ್ಡಾದಿಡ್ಡಿ ರಸ್ತೆ ದಾಟುವುದು ಮತ್ತು ಸಂದಿ - ಗೊಂದಿಯಲ್ಲಿ ನುಗ್ಗುವುದರಿಂದಲೂ ಅಪಘಾತಗಳು ಹೆಚ್ಚಾಗುತ್ತಿವೆ. ಹಾಗೆಯೇ ಸವಾರರು ಸಹ ವೇಗವಾಗಿ ಚಾಲನೆ ಮಾಡಿಕೊಂಡು ಬರುವುದರಿಂದಲೂ ಪಾದಚಾರಿಗಳ ಸಾವಿಗೆ ಕಾರಣವಾಗುತ್ತಿದೆ. ಮೃತಪಟ್ಟವರಲ್ಲಿ ಮಹಿಳೆಯರು, ವಯೋವೃದ್ಧರೇ ಹೆಚ್ಚು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಬಳ್ಳಾರಿ ನಗರ, ಹೊಸಪೇಟೆ, ಸಂಡೂರು, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಸಿರುಗುಪ್ಪ ಪಟ್ಟಣಗಳಲ್ಲಿ ಝೀಬ್ರಾ ಕ್ರಾಸಿಂಗ್​​​ಗಳೇ ಇರಲಿಲ್ಲ. ಇದನ್ನು ಮನಗಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಈ ಕುರಿತು ಕ್ರಮ ಕೈಗೊಂಡರು.

ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್

ಈಟಿವಿ ಭಾರತದೊಂದಿಗೆ ಮಾತನಾಡಿದ ಸೈದುಲು ಅಡಾವತ್, ಮೂರ್ನಾಲ್ಕು ವರ್ಷಗಳಲ್ಲಿ 1,100 ರಸ್ತೆ ಅಪಘಾತಗಳು ಸಂಭವಿಸಿದ್ದು, ಸುಮಾರು 350ಕ್ಕೂ ಅಧಿಕ ಮಂದಿ ಅಪಘಾತದಲ್ಲಿ ಅಸುನೀಗಿದ್ದಾರೆ. ಈ ಪೈಕಿ 15 ರಿಂದ 20 ಪಾದಚಾರಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details