ಬಳ್ಳಾರಿ:ಗ್ರಾಮ ಪಂಚಾಯ್ತಿ ಪಿಡಿಒ ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ಶ್ರೀಧರಗಡ್ಡೆಯ ಗ್ರಾಮದಲ್ಲಿ ನಡೆದಿದೆ. ಮನೆಯ ಪರವಾನಗಿಗಾಗಿ ನಾಗಾರ್ಜುನ ಎನ್ನುವ ವ್ಯಕ್ತಿಯಿಂದ 80 ಸಾವಿರ ರೂಪಯಿ ಲಂಚ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಗ್ರಾಮ ಪಿಡಿಒ - acb officers arrested pdo offiecer in bellary
ಗ್ರಾಮ ಪಂಚಾಯಿತಿ ಪಿಡಿಒ ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆಯ ಗ್ರಾಮದಲ್ಲಿ ನಡೆದಿದೆ. ಮನೆಯ ಪರವಾನಿಗಾಗಿ ನಾಗಾರ್ಜುನ ಎನ್ನುವ ವ್ಯಕ್ತಿಯಿಂದ 80 ಸಾವಿರ ರೂಪಯಿ ಲಂಚ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
![ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಗ್ರಾಮ ಪಿಡಿಒ acb officers caught pdo officer while teking bribe](https://etvbharatimages.akamaized.net/etvbharat/prod-images/768-512-15624799-thumbnail-3x2-blry.jpg)
ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಗ್ರಾಮ ಪಂಚಾಯತಿ ಪಿಡಿಓ
ಇದರಲ್ಲಿ ಭಾಗಿಯಾಗಿದ್ದ ಬಳ್ಳಾರಿಯ ಗುಡಾರ್ ನಗರದ ಮಾಜಿ ತಾ.ಪಂ. ಸದಸ್ಯೆ ಮಹಾಲಕ್ಷ್ಮೀ ಅವರ ಪತಿ ಜಂಬಣ್ಣ ಎಂಬುವವರು ನಾಗಾರ್ಜುನ ಎಂಬ ವ್ಯಕ್ತಿಯಿಂದ ಪಡೆದಿದ್ದ ಹಣವನ್ನು ಪಿಡಿಒಗೆ ವರ್ಗಾವಣೆ ಮಾಡುತಿದ್ದ ಸಂದರ್ಭದಲ್ಲಿ ಬಳ್ಳಾರಿಯ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಸಿದ್ದಲಿಂಗಪ್ಪ ಮತ್ತು ಜಂಭಣ್ಣ ಇಬ್ಬರನ್ನೂ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತ ಮಗಳಿಗೆ ಎರಡೆರಡು ಬಾರಿ ಬಾಲ್ಯವಿವಾಹ ಮಾಡಿಸಿದ್ಲು ಹೆತ್ತಮ್ಮ!
TAGGED:
bellary pdo officer case