ಬಳ್ಳಾರಿ: ಮೂರು ದಿನಗಳಲ್ಲಿ ಮಹಾನಗರ ಪಾಲಿಕೆಯ ಡ್ರೈವರ್, ಕ್ಲೀನರ್ಗಳಿಗೆ ವೇತನ ಕೊಡಿಸುವ ಭರವಸೆಯನ್ನು ಶಾಸಕ ಜಿ.ಸೋಮಶೇಖರ ರೆಡ್ಡಿ ನೀಡಿದ್ದಾರೆ.
ಮೂರು ದಿನಗಳಲ್ಲಿ ಡ್ರೈವರ್, ಕ್ಲೀನರ್ಗಳಿಗೆ ವೇತನ ಕೊಡಿಸುವೆ: ಶಾಸಕ ಸೋಮಶೇಖರ ರೆಡ್ಡಿ ಭರವಸೆ - G. Somadhekar Reddy
ಮೂರು ದಿನಗಳಲ್ಲಿ ಮಹಾನಗರ ಪಾಲಿಕೆಯ ಡ್ರೈವರ್, ಕ್ಲೀನರ್ಗಳಿಗೆ ವೇತನ ಕೊಡಿಸುವೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ.
"ಆರು ತಿಂಗಳಿಂದ ಮಹಾನಗರ ಪಾಲಿಕೆಯ ಚಾಲಕರಿಗೆ, ಕ್ಲೀನರ್ಗಳಿಗೆ ಸಂಬಳವಿಲ್ಲ" ಎಂಬ ಸುದ್ದಿಯನ್ನು ಈಟಿವಿ ಭಾರತ ನಿನ್ನೆ ಪ್ರಕಟ ಮಾಡಿತ್ತು. ಇಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಈಟಿವಿ ಭಾರತದೊಂದಿಗೆ ಮಾತನಾಡಿ, ಡೈರೆಕ್ಟರ್ ಫಾರ್ ಮುನ್ಸಿಪಾಲ್ ಅಡ್ಮಿನಿಸ್ಟ್ರೇಷನ್ ಸಂಬಂಧಪಟ್ಟ ಅಧಿಕಾರಿ ಕಾವೇರಿ ಅವರೊಂದಿಗೆ ಮಾತನಾಡಿದ್ದೇನೆ. ಬೇರೆ ಫಂಡ್ ( ಹಣ) ಇದೆ. ಅದನ್ನು ಬಳಸಿಕೊಂಡು ಬಳಿಕ ತೆರಿಗೆ ವಸೂಲಿ ಮಾಡಿದ ನಂತರ ಆ ಹಣವನ್ನು ಫಂಡ್ ತೆಗೆದುಕೊಂಡಿದಕ್ಕೆ ಹಾಕಿ ಎಂದು ಹೇಳಿದ್ದಾರೆ ಎಂದರು. ಸಂಬಂಧಿಸಿದ ಅರ್ಜಿಯನ್ನು ಬೆಂಗಳೂರಿಗೆ ಕಳಿಸಿಕೊಟ್ಟಿದ್ದೇವೆ. ಇನ್ನು ಎರಡು ಮೂರು ದಿನಗಳಲ್ಲಿ ಮಹಾನಗರ ಪಾಲಿಕೆಯ ಡ್ರೈವರ್, ಕ್ಲೀನರ್ಗಳಿಗೆ ಸಂಬಳ ಕೊಡಿಸುತ್ತೇವೆ ಎಂದು ತಿಳಿಸಿದರು.