ಬಳ್ಳಾರಿ:ನಗರದ ಬ್ರೂಸ್ ಪೇಟ್ ಠಾಣೆಯ ವೃತ್ತದಲ್ಲಿ ಐದು ಪಲ್ಲಕ್ಕಿಗಳು ಸೇರುತ್ತವೆ, ಆ ಪಲ್ಲಕ್ಕಿಗಳನ್ನು ನೋಡಿ ಬನ್ನಿ ಮುಡಿಯಲು ಸಾವಿರಾರೂ ಭಕ್ತರು ಆಗಮಿಸಿದ್ದರು.
ಬಳ್ಳಾರಿ: ಐದು ಮಠ - ದೇವಸ್ಥಾನಗಳಿಂದ ಪಲ್ಲಕ್ಕಿ ಉತ್ಸವ, ಗಮನ ಸೆಳೆದ ಕಟಿಗೆ ವರಸೆ - latest bellary news
ನಗರದ ಬ್ರೂಸ್ ಪೇಟ್ ಠಾಣೆಯ ವೃತ್ತದಲ್ಲಿ ಐದು ಪಲ್ಲಕ್ಕಿಗಳು ಸೇರುತ್ತವೆ, ಆ ಪಲ್ಲಕ್ಕಿಗಳನ್ನು ನೋಡಿ ಬನ್ನಿ ಮುಡಿಯಲು ಸಾವಿರಾರೂ ಭಕ್ತರು ಆಗಮಿಸಿದ್ದರು.
ನಗರದ ಐದು ಪಲ್ಲಕ್ಕಿಗಳಾದ ಮರಿಸ್ವಾಮಿ ಮಠದ ಪಲ್ಲಕ್ಕಿ, ಬಸವನ ದೇವರ ಗುಡಿ ಪಲ್ಲಕ್ಕಿ, ವೀರಭದ್ರೇಶ್ವರ ಪಲ್ಲಕ್ಕಿ, ಸಾಲೇಶ್ವರ ಪಲ್ಲಕ್ಕಿ, ಗವಿ ಸಿದ್ದೇಶ್ವರ ಪಲ್ಲಕ್ಕಿ ಐದು ಪಲ್ಲಕ್ಕಿಗಳು ಒಟ್ಟಿಗೆ ಸೇರಿ ಮಿಲ್ಲರ್ ಪೇಟೆಯ ಹತ್ತಿರದ ಕಲ್ಯಾಣಮಠದ ಸ್ವಾಮಿದೇವಸ್ಥಾನ ಆವರಣದಲ್ಲಿ ಇರುವ ಬನ್ನಿಮರಕ್ಕೆ ಬನ್ನಿ ಮುಡಿಯಲಾಗುತ್ತದೆಯೆಂದು ನಗರದ ಮರಿಸ್ವಾಮಿ ಮಠದ ಎಂ.ಕಾರ್ತಿಕ್ ತಿಳಿಸಿದರು.
ಕಟಿಗೆ ವರಸೆ: ಲಾಟಿಗೆ ಎರಡು ತುದಿಗಳಲ್ಲಿ ಬೆಂಕಿ ಹಚ್ಚಿಕೊಂಡು ಚಿಕ್ಕ ಮಕ್ಕಳು, ಯುವಕರು, ಹಿರಿಯರು ಕಟಿಗೆ ವರಸೆ ಪ್ರದರ್ಶಿಸಿ ಜನ ನಿಬ್ಬೆರಗಾದರು. ಇದನ್ನು ನೋಡಲು ಜನಸಾಗರವೇ ಆಗಮಿಸಿದ್ದು, ಈ ವೇಳೆ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.