ಬಳ್ಳಾರಿ:ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್ಗಳಲ್ಲಿ ಇಂದಿನಿಂದ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅಗತ್ಯ ಬೆಂಬಲ ಬೆಲೆ ನಿಗದಿಪಡಿಸಿ ಭತ್ತದ ದಾಸ್ತಾನು ಖರೀದಿಸುವ ಸಲುವಾಗಿ ಖರೀದಿ ಅಧಿಕಾರಿ ಮತ್ತು ಗ್ರೇಡರ್ ಅಧಿಕಾರಿಗಳನ್ನು ಈಗಾಗಲೇ ಎಪಿಎಂಸಿ ಯಾರ್ಡ್ಗಳಿಗೆ ನಿಯೋಜನೆ ಮಾಡಲಾಗಿದೆ.
ಈ ಕುರಿತು ಈಟಿವಿ ಭಾರತಕ್ಕೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯ 9 ಎಪಿಎಂಸಿ ಯಾರ್ಡ್ಗಳಲ್ಲಿ ಜನವರಿ 1ರಿಂದ ಮಾರ್ಚ್ 30ರವರೆಗೆ ಭತ್ತದ ದಾಸ್ತಾನನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.
ಗಣಿನಾಡಿನ 9 ಎಪಿಎಂಸಿ ಯಾರ್ಡ್ಗಳಲ್ಲಿ ಭತ್ತ ಖರೀದಿ ಕೇಂದ್ರ ಆರಂಭ ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ 1,815 ರೂ, ಗ್ರೇಡ್ ಎ ಭತ್ತಕ್ಕೆ 1,835 ರೂ, ರಾಗಿಗೆ 3,150 ರೂ, ಹೈಬ್ರಿಡ್ ಜೋಳಕ್ಕೆ 2,550ರೂ, ಮಾಲ್ದಂಡಿ ಜೋಳಕ್ಕೆ 2,570 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಅದರಂತೆ ಭತ್ತ ಸೇರಿದಂತೆ ಇತರೆ ದಾಸ್ತಾನುಗಳನ್ನು ಖರೀದಿಸಲು ಈಗಾಗಲೇ ಎಪಿಎಂಸಿ ಯಾರ್ಡ್ಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ರು.
ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದಲ್ಲಿ ಜನವರಿ 10ರವರೆಗೆ ರೈತರ ನೋಂದಣಿ ಕಾರ್ಯ ಚಾಲ್ತಿಯಲ್ಲಿರಲಿದೆ. ಜಿಲ್ಲೆಯ ರೈತರು ಜಮೀನಿಗೆ ಸಂಬಂಧಿಸಿದ ಪಹಣಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಬಳ್ಳಾರಿ ಎಪಿಎಂಸಿ ಯಾರ್ಡ್ನ ಖರೀದಿ ಅಧಿಕಾರಿ ಎಂ.ಜೆ.ಯಶವಂತರಾವ್ ಮೊ.ನಂ.7204033996,
ಸಿರುಗುಪ್ಪದ ಖರೀದಿ ಅಧಿಕಾರಿ ಎಂ.ಪಿ.ಗೋವಿಂದರೆಡ್ಡಿ ಮೊ.ನಂ.9448755122,
ಸಂಡೂರಿನ ಖರೀದಿ ಅಧಿಕಾರಿ ಎಂ.ಚಿನ್ನಪ್ಪ ಮೊ.ನಂ.9380937990/9980450713,
ಕೊಟ್ಟೂರಿನ ಖರೀದಿ ಅಧಿಕಾರಿ ಜಿ.ಈಶ್ವರಪ್ಪ ಮೊ.ನಂ.9945006241,
ಹೊಸಪೇಟೆಯ ಖರೀದಿ ಅಧಿಕಾರಿ ಎಂ.ಶಿವರಾಜ ಮೊ.ನಂ.9535627707,
ಕಂಪ್ಲಿಯ ಖರೀದಿ ಅಧಿಕಾರಿ ಎ.ಸೆಲ್ವರಾಜ ಮೊ.ನಂ.9341258729,
ಹೆಚ್.ಬಿ. ಹಳ್ಳಿಯ ಖರೀದಿ ಅಧಿಕಾರಿ ಬಿ.ಬಸವರಾಜ ಮೊ.ನಂ.9986606310,
ಹಡಗಲಿಯ ಖರೀದಿ ಅಧಿಕಾರಿ ಇರ್ಫಾನ್ ಭಾಷಾ ಮೊ.ನಂ.9886734876,
ಹರಪನಹಳ್ಳಿಯ ಖರೀದಿ ಅಧಿಕಾರಿ ಸಿ.ರಾಮಚಂದ್ರಪ್ಪ ಮೊ.ನಂ.81477- 38412
ಈ ಮೇಲೆ ನೀಡಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಡಿಸಿ ನಕುಲ್ ತಿಳಿಸಿದ್ದಾರೆ.